ಹೇಮಾವತಿ ನದಿಯನ್ನು ಬಗೆದು ಅಕ್ರಮವಾಗಿ ಸಂಗ್ರಹಣೆ ಮಾಡಿದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರವಿಕಿರಣ್ ವಶಕ್ಕೆ ಸಕಲೇಶಪುರ -: ಪಟ್ಟಣ ಹಾಗೂ ತಾಲೂಕಿನಾದ್ಯತ ಗ್ರಾಮ ವ್ಯಾಪ್ತಿ ಸೇರಿದಂತೆ ವಿವಿಧ ಗ್ರಾಮ ವ್ಯಾಪ್ತಿಯ ಹೇಮಾವತಿ ತೀರದಿಂದ ಮರಳು ದಂಧೆ ಕೋರರು ಅಕ್ರಮವಾಗಿ ಮರಳನ್ನು ತೆಗೆದು ಹಗಲು ರಾತ್ರಿ ಎನ್ನದೆ ಪಿಕಪ್ ಹಾಗೂ ಓಮಿನಿ ವಾಹನದಲ್ಲಿ ರಾಜಾರೋಷವಾಗಿ ಒಡೆಯುತ್ತಿದ್ದು. ಗಮನಕ್ಕೆ ಬಂದ ಕೂಡಲೇ ಉಪ ವಿಭಾಗಾಧಿಕಾರಿಗಳಾದ ಡಾ. ಶೃತಿ . ಅಧಿಕಾರಿಗಳ ಸಭೆ ಕರೆದು ಅಕ್ರಮ ದಂಧೆ ಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಹೇಮಾವತಿ ನದಿ ತೀರದಲ್ಲಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಕ್ಕೆ ಪಡೆಯಲಾಯಿತು. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಅಧಿಕಾರಿಗಳಾದ ರವಿಕಿರಣ್, ಹಾಗೂ ಸಿಬ್ಬಂದಿ ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಪಿ ಡಬ್ಲ್ಯೂ ಡಿ ಇಲಾಖೆ ಅಧಿಕಾರಿಗಳು, ಮತ್ತು ಪೊಲೀಸ್ ಇಲಾಖೆಯವರು ಸೇರಿದಂತೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಹೊಸಪಡಿಸಿಕೊಂಡು ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸಂಗ್ರಹಣೆ ಮಾಡಲಾಗುತಿದೆ, ಕೆಲವು ದಿನಗಳಿಂದಲೂ ಅನಧಿಕೃತವಾಗಿ ರಾತ್ರಿ ವೇಳೆ ಪಿಕಪ್ ಹಾಗೂ ಒಮಿನಿ ವಾಹನ ಗಳಲ್ಲಿ ಅನಾದಿಕೃತವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು. ತಾಲೂಕು ಕಚೇರಿಯ ಎದುರುಗಡೆ ಸಂಗ್ರಹಿಸಿದ ಮರಳನ್ನು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಪಿಡಬ್ಲ್ಯೂಡಿ ಕಚೇರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುವುದು. ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರವಿಕಿರಣ್ ತಿಳಿಸಿದ್ದಾರೆ.