ಸರ್ಕಾರಿ ಆಸ್ಪತ್ರೆ ಆಡಳಿತ ಅಧಿಕಾರಿ ಹಾಗೂ ಆಸ್ಪತ್ರೆ ನಿರ್ವಹಣೆ ಸಿಬ್ಬಂದಿಯ ನಿರ್ಲಕ್ಷತನ ಫ್ಯಾನ್ ಕಳಚಿ ಮಗುವಿನ ಕುತ್ತಿಗೆ ಮೇಲೆ ಬಿದ್ದಿರುವ ದುರ್ಘಟನೆ ನಡೆದಿದೆ ಸಕಲೇಶಪುರ . ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುತ್ತದೆ. ತುರ್ತು ಚಿಕಿತ್ಸಾ ವಾರ್ಡನಲ್ಲಿ ನೇತಾಡುತ್ತಿರುವ ಫ್ಯಾನ್ ಕಳಚಿ ಕೊಂಡು ಎಂಟು ವರ್ಷದ ಮಗುವಿನ ಕುತ್ತಿಗೆಯ ಮೇಲೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ, ಮಗುವಿನ ಪೋಷಕರು ಚಿಕಿತ್ಸೆ ನೀಡಿ ಎಕ್ಸರೇ ಮತ್ತು ಸ್ಕ್ಯಾನ್ ಮಾಡಲು ಮುಂದಾಗಿರುತ್ತಾರೆ, ಆಸ್ಪತ್ರೆ ವಾರ್ಡನಲ್ಲಿ ಎತ್ತರದಿಂದ ಉದ್ದವಾದ ಪೈಪ್ ಹಾಕಿ ತೂಗು ಹಾಕಿರುವ ಫ್ಯಾನ್ ಈಗಲೂ ಆಗಲು ಬೀಳುವ ಸ್ಥಿತಿಯಲ್ಲಿದ್ದು, ಸ್ವಿಚ್ ಆನ್ ಮಾಡಿದರೆ ಫ್ಯಾನ್ ಆಚೆ ಈಚೆ ತುಗಡುವುದನ್ನುನೋಡಿದರೆ ಯಾವಾಗ ನೆಟ್ ಬೋಲ್ಟ್ ಕಳಸಿಕೊಂಡು ಬೀಳುತ್ತದೆ ಎಂಬ ಭಯದಿಂದ ರೋಗಿ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ, ಇದಕ್ಕೆ ಮುಖ್ಯ ಕಾರಣ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಮತ್ತು ಆಸ್ಪತ್ರೆ ನಿರ್ವಹಣೆ ಸಿಬ್ಬಂದಿಯವರ ನಿರ್ಲಕ್ಷ್ಯ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ ಎಂದು ಸಾರ್ವಜನಿಕರು ದೂರೀರುತ್ತಾರೆ. ಹಾಗೆ ಕೂಲಿ ಕಾರ್ಮಿಕರು, ಬಡವರು ರೈತರು, ಕೆಲವು ತಿಂಗಳಿಂದ 108 ಸುಸ್ಥಿತಿ ಇಲ್ಲದ ಆಂಬುಲೆನ್ಸ್ ಸೇವೆ . ಖಾಸಗಿ ಅಂಬುಲೆನ್ಸ್ ಮೊರೆಹೋಗುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆ ನುಂಗಲಾರದ ತುತ್ತಾಗಿದೆ. ಕೆಲವು ದಿನಗಳ ಹಿಂದೆ ನೀರಿನ ಅಭಾವ ಆಗುವವರೆಗೂ ಮೋಟಾರ್ಗಳನ್ನು ರಿಪೇರಿ ಮಾಡಿಸದ ನಿರ್ಲಕ್ಷ ಆಡಳಿತ ಅಧಿಕಾರಿ. ಮತ್ತು ಸ್ವಚ್ಛತೆಯ ಬಗ್ಗೆ ಗಮನಕೊಡದ ಅಧಿಕಾರಿ ಹಾಗೆಯೇ ಇತ್ತೀಚಿನ ದಿನಗಳಲ್ಲಿ ಯಾವುದೇ ರೋಗಿ ಬಂದರೂ ಕೂಡ ಪ್ರಥಮ ಚಿಕಿತ್ಸೆ ಮಾಡಿಸಿ ಜಿಲ್ಲಾ ಆಸ್ಪತ್ರೆಗೆ ಪ್ರವಾನಿಸುವುದು ರೂಢಿಯಾಗಿದೆ. ಎಂದು ಹಾಗೂ ಸಾರ್ವಜನಿಕರು ದೂರಿರುತ್ತಾರೆ.