ಅಕ್ರಮವಾಗಿ ಶೇಖರಣೆ ಮಾಡಿದ್ದ ಮರಳನ್ನು ವಶಕ್ಕೆ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರವಿಕಿರಣ್ ಸಕಲೇಶಪುರ -: ಪಟ್ಟಣದ ಹೇಮಾವತಿ ನದಿ ತೀರದಲ್ಲಿ ವಿದ್ಯುತ್ ಐ ಟೆನ್ಶನ್ ಕಂಬಗಳ ಹತ್ತಿರ (ಕಪ್ಪೆ ಹೋಂಡಾ) ಮರಳು ದಂದೆ ಕೋರರು ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನಾದ್ಯತ ಗ್ರಾಮ ವ್ಯಾಪ್ತಿಯ ಹೇಮಾವತಿ ತೀರದಿಂದ ಮರಳು ದಂಧೆ ಕೋರರು ಅಕ್ರಮವಾಗಿ ಮರಳನ್ನು ತೆಗೆದು ಹಗಲು ರಾತ್ರಿ ಎನ್ನದೆ ಪಿಕಪ್ ಹಾಗೂ ಓಮಿನಿ ವಾಹನದಲ್ಲಿ ರಾಜಾರೋಷವಾಗಿ ಒಡೆಯುತ್ತಿದ್ದು. ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಆಗಮಿಸಿ ವಶಕ್ಕೆ ಪಡೆದಿದ್ದಾರೆ. ಅಕ್ರಮ ದಂಧೆ ಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನಕ್ಕೆ ಇಲಾಖೆ ಅಧಿಕಾರಿ ರವಿಕಿರಣ್ ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಹಾಗೂ ಚಾಲಕರಾದ ಕುಮಾರ್ . ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಕ್ಕೆ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸಂಗ್ರಹಣೆ ಮಾಡಿದ್ದಾರೆ. ರಾತ್ರಿ ವೇಳೆ ಪಿಕಪ್ ಹಾಗೂ ಒಮಿನಿ ವಾಹನ ಗಳಲ್ಲಿ ಅನಾದಿಕೃತವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಂಪ್ಲೇಂಟ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಅಕ್ರಮ ಮರಳು ದಂಧೆ ಕೋರರಿಗೆ ಸಿಂಹ ಸ್ವಪ್ನವಾಗಿದ್ದಾರೆ. ಸಿಜ್ ಮಾಡಿ ಮರಳನ್ನು ಸ್ಥಳದಲ್ಲಿಯೇ ಟೆಂಡರ್ ಪ್ರಕ್ರಿಯೆ ಮಾಡಲಾಯಿತು. ಇತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೀಜ್ ಮಾಡಿದ ಮರಳನ್ನು ಪಿಡಬ್ಲ್ಯೂಡಿ ಕಚೇರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.