ಅಕ್ರಮ ಮರಳು ದಂಧೆ ಮಚ್ಚು ಲಾಂಗುಗಳಲ್ಲಿ ಹೊಡೆದಾಟ ಶಾಹಿದ್ ಮತ್ತು ಇಮ್ರಾನ್ ವ್ಯಕ್ತಿಯಿಂದ ಹಲ್ಲೆ ಅನ್ಸರ್ ಎಂಬುವರು ಆಸ್ಪತ್ರೆ ದಾಖಲಾಗಿರುವ ಪ್ರಕರಣ ಘಟನೆ ನಡೆದಿದೆ .
ಅಕ್ರಮ ಮರಳು ಸಾಗಿಸುವವರ ನಡುವೆ 05/06/24 ರಂದು ಬೆಳಗಿನ ಜಾವ ಗಲಾಟೆ ನಡೆದಿದ್ದು ಲಾಂಗು ಮಚ್ಚು ಹಿಡಿದು ಹೊಡೆದಾಡುವ ಅಂತ ತಲುಪಿದೆ. ಕೊಲೆ ಮಾಡುವ ಹಂತಕ್ಕೆ ಮರಳು ಸಾಗಾಟ ಮಾಡುವವರು ತಲುಪಿದ್ದಾರೆ .
ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿರುವ ಘಟನೆ ಸಕಲೇಶಪುರದ ಹಳೆ ಸಂತೆ ವೇರಿ ಸರ್ಕಲ್ ನಲ್ಲಿ ನಡೆದಿದೆ. ಪ್ರತಿನಿತ್ಯ ಸಕಲೇಶಪುರ ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುವವರ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕಾದ ಕೆಲವು ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ
. ಮೊದಲು ಮರಳು ಸಾಗಿಸುವ ವಿಚಾರವಾಗಿ ಗಲಾಟೆ ನಡೆದು. ಮಚ್ಚಿನಲ್ಲಿ ಹೊಡೆದಾಡು ಕೊಂಡಿರುವ ಕೈಗೆ ಏಟಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಒಂದು ಕಾರ್ ನ್ನೂ ಸಿಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತು ಮರಳನ್ನು ಸೀಜ್ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಹಾಗೂ ನಗರ ವ್ಯಾಪ್ತಿಯಲ್ಲಿ ಹೆಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು. ಇಂಥ ಮರಳು ದಂಧೆ ಮಾಡುವವರ ವಿರುದ್ಧ ಎಷ್ಟು ಬಾರಿ ಹೇಳಿದರು ಕೇಳದ ತಾಲೂಕು .ಇಲಾಖೆ ಅಧಿಕಾರಿಗಳು. ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಅಕ್ರಮ ಮರಳು ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ವ್ಯಕ್ತಪಡಿಸಿದ್ದಾರೆ.