ಕನ್ನಡಿಗನ ಮಗನಿಗೆ ಕನ್ನಡ ಭಾಷೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿಭಾ ಪುರಸ್ಕಾರ.
ಸಕಲೇಶಪುರ: ಪಟ್ಟಣದ ಲಯನ್ಸ್ ಹಾಲ್ ನಲ್ಲಿ ಕನ್ಡಡ ಸಾಹಿತ್ಯ ಪರಿಷತ್ತು ಸಕಲೇಶಪುರ ತಾಲೂಕು ಘಟಕ* ದ ವತಿಯಿಂದ ೦೮/೦೬/೨೦೨೪ ಶನಿವಾರ
೨೦೨೩-೨೦೨೪ ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ *ಕನ್ನಡ ಭಾಷೆ* ವಿಷಯದಲ್ಲಿ *ಅತಿ ಹೆಚ್ಚು ಅಂಕ* ಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ *ಪ್ರತಿಭಾ ಪುರಸ್ಕಾರ* ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ೬೨೫ಕ್ಕೆ *೫೭೯* ಅಂಕದೊಂದಿಗೆ *೯೨.೬೪ %* ಪಡೆದು ಕನ್ನಡಬಾಷೆಯಲ್ಲಿ ೧೨೫ಕ್ಕೆ *೧೨೫ ಅಂಕ* ಪಡೆದ *ಕನ್ನಡಿಗ* ಎಂದೇ ಚಿರಪರಿಚಿತರಾಗಿರುವ *ಬಿ.ಬಿ.ವೆದುನಂದನ* ಮತ್ತು *ಸುಮಿತ್ರ ಬಿ.ಬಿ* ರವರ ಮಗ ಸಕಲೇಶಪುರ *ರೋಟರಿ ಆಂಗ್ಲ ಮಾಧ್ಯಮ ಶಾಲೆ* ಯ ವಿಧ್ಯಾರ್ಥಿ *ಪ್ರಜ್ವಲ್.ವಿ.* ರವರಿಗೆ ವಿಧ್ಯಾರ್ಥಿ ಗೈರುಹಾಜರು ಇರುವ ಕಾರಣ ಪೋಷಕರಿಗೆ *ಪ್ರತಿಭಾ ಪುರಸ್ಕಾರ* ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದ ಶಾಸಕರು,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು, ವಿವಿಧ ಕನ್ನಡಪರ ಸಂಘಟನೆಯವರು,ವಿವಿದ ಶಾಲೆಯ ಶಿಕ್ಷಕರು, ವಿಧ್ಯಾರ್ಥಿಗಳು ಹಾಗೂ ಪೋಷಕರು ಪತ್ರಕರ್ತರು ಹಾಜರಿದ್ದರು.