ಸುಳ್ಳು ದಾಖಲೆ ಸೃಷ್ಟಿಸಿ ಎರಡು ಪ್ರತ್ಯೇಕ TATA INTRA ವಾಹನದಲ್ಲಿ ತುಂಬಿದ್ದ 5 ಜಾನುವಾರುಗಳ ಸಂರಕ್ಷಣೆ…
ಸಕಲೇಶಪುರ – ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪೋಲಿಸರು ಸಂಪೂರ್ಣ ನಾಕ ಬಂಧಿ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಈ ಎರಡು ಪ್ರತ್ಯೇಕ TATA INTRA – KA 13 D 3193 ಹಾಗೂ KA 13 D 4159 ಗೂಡ್ಸ್ ವಾಹನಗಳಲ್ಲಿ ದಾಖಲೆ ಇದೆ ಎಂಬಂತೆ ಬಿಂಬಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜಾನುವಾರು ತುಂಬಿಕೊಂಡು ಬರುತ್ತಿದ್ದ ವಾಹನಗಳನ್ನು 112 ಗಸ್ತು ವಾಹನದಲ್ಲಿದ್ದ ಪೋಲಿಸರು ಟೋಲ್ ಗೇಟ್ ಬಳಿ ತಡೆದು ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ದಾಖಲೆ ಇದೆ ಎಂಬಂತೆ ಕಂಡರೂ ಪೋಲಿಸರಿಗೆ ಅನುಮಾನ ಬಂದು ವಾಹನಗಳನ್ನು ನಗರ ಠಾಣೆಗೆ ಕರೆತಂದಿದ್ದಾರೆ.
ನಗರ ಠಾಣೆ ವೃತ್ತ ನಿರೀಕ್ಷಕರು ವಾಹನ ದಾಖಲೆ ಸೇರಿದಂತೆ ಜಾನುವಾರು ಸಾಗಿಸಲು ಪಡೆದಿದ್ದ ದಾಖಲೆಗಳನ್ನು ಪುನಃ ಪರಿಶೀಲನೆ ಮಾಡಿದಾಗ ದಾಖಲೆಯಲ್ಲಿ ಉಲ್ಲೇಖಿಸಿದ್ದ ಜಾನುವಾರು ಸಂಖ್ಯೆಗಳಿಗು ವಾಹನದಲ್ಲಿದ್ದ ಜಾನುವಾರುಗಳ ಸಂಖ್ಯೆಗೂ ವ್ಯತ್ಯಾಸ ಕಂಡುಬಂದಿದೆ. ತಕ್ಷಣ ವಾಹನ ಹಿನ್ನೆಲೆ ಪರಿಶೀಲನೆ ಮಾಡಿದಾಗ ಈ ಹಿಂದೆ ಕೂಡ ಅನೇಕ ಬಾರಿ ಈ ವಾಹನಗಳಿಗೆ ಅಕ್ರಮ ಜಾನುವಾರು ಸಾಗಾಟ ಮಾಡದಂತೆ ತಿಳಿ ಹೇಳಿದ್ದರು ಪುನಃ ಪುನಃ ಇದೆ ವೃತ್ತಿಯಲ್ಲಿ ಮುಂದುವರೆಯುತ್ತಿರುವುದು. ಹಾಗೂ ದಾಖಲೆಗಳ ಹೊಂದಾಣಿಕೆ ಆಗದಿರುವುದನ್ನು ಮನಗಂಡು ವಿಚಾರಣೆ ನಡೆಸಿ ಗೋವು ಹತ್ಯೆ ನಿಷೇಧ ಪ್ರತಿಬಂಧಕ 2020 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡಿರುವ ಗೋವುಗಳನ್ನು ಗೋಶಾಲೆಗೆ ಬಿಡಲಾಗುವುದು ಎಂದು ಮಾಹಿತಿ ನೀಡಿವೆ.