ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಟ್ಟೆ ಗದ್ದೆ ನಾಗರಾಜ್ ಆಕ್ರೋಶ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಳೆದ ಎರಡುವರೆ ತಿಂಗಳಿನಿಂದ ಲೀಟರ್ 99 ರೂಪಾಯಿ ಸಿಗುತ್ತಿದ್ದರೆ ಶನಿವಾರ ರಾಜ್ಯ ಸರಕಾರ ಏಕಾಏಕಿ 3.20 ರೂ.ದರ ಏರಿಕೆ ಮಾಡಿದ್ದು 102 ದಾಟಿದೆ. ಡೀಸೆಲ್ ದರ ಮೂರು ರೂಪಾಯಿ ಏರಿಕೆ ಆಗೀದು
ಸರ್ಕಾರದ ಖಜಾನೆ ಖಾಲಿಯಾಗಿರುವ ಸಂಕೇತ ಎಂದು ಕಟ್ಟೆ ಗದ್ದೆ ನಾಗರಾಜ್ ಬಿಜೆಪಿ ಮುಖಂಡರು. ಹೇಳಿದ್ದಾರೆ.
ಬಡ ಜನರಿಗೆ ಉಚಿತ ಗ್ಯಾರಂಟಿಯೊಂದಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯ ಗ್ಯಾರಂಟಿ ಸಿಗಲಿದೆ. ಕಾಂಗ್ರೆಸ್
ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಈಗಲೇ ಬೆಲೆ ಏರಿಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರೆ ಜನ ತಮ್ಮ ತಮ್ಮ ಬಜೆಟ್ ಹೊಂದಾಣಿಕೆ ಮಾಡಿಕೊಂಡು ಸಿದ್ದವಾಗುತ್ತಾರೆ ಎಂದು ಹೇಳಿದ್ದಾರೆ
ಈಗಾಗಲೇ ಆಸ್ತಿ ತೆರಿಗೆ,ಸ್ಟಾಂಪ್ ಡ್ಯೂಟಿ ಸಹಿತ ದಿನ ಬಳಕೆಯ ವಸ್ತುಗಳ ಬೆಲೆ ಸದ್ದಿಲ್ಲದೆ ಏರಿಕೆಯಾಗಿದ್ದು ಜನತೆ ಇದಕ್ಕೆ ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ
ಎಂದು ಕಟ್ಟೆಗದ್ದೆ ನಾಗರಾಜ್ ಬಿಜೆಪಿ ಮುಖಂಡರು ಎಚ್ಚರಿಸಿದ್ದಾರೆ ಜನತೆ ಇದಕ್ಕೆ ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.