ಸಕಲೇಶಪುರ ತಾಲ್ಲೂಕಿನ ವಾಟೇಹಳ್ಳ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ತುಳಿತಕ್ಕೊಳಗಾದಂತಹ ದಿವಾಕರ ಶೆಟ್ಟಿಯವರ ಆರೋಗ್ಯವನ್ನ ವಿಚಾರಿಸಿದ ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದರಾದಂತಹ ಸನ್ಮಾನ್ಯ ಶ್ರೀ ಶ್ರೇಯಸ್ ಪಟೇಲ್ ರವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆನೆ ತುಳಿತಕ್ಕೆ ಹೊಳಗಾದ ದಿವಾಕರ್ ಶೆಟ್ಟಿ ಅವರ ರೋಗ್ಯವನ್ನು ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ. ಆರ್ಥಿಕ ಸಹಾಯವನ್ನು ಮಾಡಿ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ನೀಡುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಮಾಜಿ ಎಂಎಲ್ಸಿಗಳು ಹಾಗೂ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸನ್ಮಾನ್ಯ ಶ್ರೀ ಎಂ ಗೋಪಾಲಸ್ವಾಮಿ ಅವರು ಕೂಡ ಆರೋಗ್ಯವನ್ನು ವಿಚಾರಿಸಿ ಸರ್ಕಾರದಿಂದ ದೊರೆಯುವಂತಹ ಪರಿಹಾರವನ್ನ ಕೊಡಿಸುವುದಾಗಿ ಭರವಸೆಯನ್ನು ನೀಡಿದರು. ಸಕಲೇಶಪುರ ಕ್ಷೇತ್ರದ ಮುಖಂಡರಾದಂತಹ ಮುರಳಿ ಮೋಹನ್ ಆರೋಗ್ಯ ವಿಚಾರಿಸಿ ಆರ್ಥಿಕ ಸಹಾಯವನ್ನು ಮಾಡಿರುತ್ತಾರೆ.
ಇವರೊಂದಿಗೆ ಜಿಲ್ಲೆ ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.