ಬಜರಂಗದಳ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ವಧೆ ಮಾಡಲು ಕಾರಿಗೆ ಜಾನುವಾರು ತುಂಬುತ್ತಿದ್ದಾಗ ಪೋಲಿಸರು ದಾಳಿ. ಅಕ್ರಮವಾಗಿ ಕಾರಿನಲ್ಲಿ ಗೋವು ಸಮೇತ ವಾಹನ ಪೋಲಿಸ್ ವಶಕ್ಕೆ. ಆರೋಪಿಗಳು ಪರಾರಿ.
ಸಕಲೇಶಪುರ – ಬಕ್ರೀದ್ ಆಚರಣೆ ಹಿನ್ನೆಲೆ ಬಂದೋಬಸ್ತ್’ನಲ್ಲಿದ್ದ ನಗರ ಠಾಣೆ ಪೊಲೀಸರು ಅಕ್ರಮವಾಗಿ OMNi ಕಾರಿನಲ್ಲಿ ತುಂಬಿದ್ದ 1 ಹೋರಿಯನ್ನು ರಕ್ಷಣೆ ಮಾಡಿದ್ದಾರೆ.
ಬೆಳಗ್ಗೆ 10 ಗಂಟೆಗೆ ಸುಮಾರಿಗೆ ನಗರದ ಹೌಸಿಂಗ್ ಬೋರ್ಡ್. ಬಡಾವಣೆಯಲ್ಲಿ ಅತೀಕ್ ಎಂಬುವವರಿಗೆ ಸೇರಿದ ಮನೆಯ ಒಳಗಿನ ಕಾಂಪೌಂಡ್ ಒಳಗೆ KA-02-7179 OMNI ಕಾರಿನೊಳಗೆ ಅಕ್ರಮವಾಗಿ ಹೋರಿಯನ್ನು ತುಂಬುತ್ತಿರುವ ಖಚಿತವಾದ ಮಾಹಿತಿ ಬಜರಂಗದಳ ಕಾರ್ಯಕರ್ತರು ಪೋಲಿಸರಿಗೆ ನೀಡಿದ್ದು ಕಾರ್ಯಪವೃತ್ತರಾದ ನಗರ ಠಾಣೆ ದಾಳಿ ನಡೆಸಿದ್ದಾರೆ.
ಪೋಲಿಸರನ್ನು ಕಂಡೊಡನೆ ಸ್ಥಳದಲ್ಲಿದ್ದ ಕಾರನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಗಿದ್ದು ಕಾರಿನೊಳಗೆ ಹೋರಿ ಇರುವುದನ್ನು ಕಂಡು ಪೋಲಿಸರು ಕಾರನ್ನು ವಶಪಡಿಸಿಕೊಂಡು ಗೋವು ಹತ್ಯೆ ನಿಷೇಧ ಕಾಯ್ದೆಯಡಿ 2020 ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ಕಾರ್ಯ ಶುರು ಮಾಡಿದ್ದಾರೆ. ಹೋರಿಯನ್ನು ರಕ್ಷಣೆ ಮಾಡಿ ಗೋಶಾಲೆಗೆ ಬಿಡಲಾಗುವುದು ಎಂದು ಪೋಲಿಸ್ ಮೂಲಗಳು ತಿಳಿಸಿವೆ.