*ಸಿರಿಯಿಪ್ಪ ಕಾಲಕ್ಕೆ ಕರೆದು ದಾನವ ನೀಡೋ ಉದಾರಭಾವಿ ಪುನೀತ್ ಬನ್ನಹಳ್ಳಿ.*
ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು ಕೈಲಾಸ |
ನೆರೆಮನೆಯಕ್ಕು ಸರ್ವಜ್ಞ ||
ಈ ಸರ್ವಜ್ಞ ವಾಣಿಯನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವವರು ಶರಣ ಪುನೀತ್ ಬನ್ನಹಳ್ಳಿ ಶರಣೆ ಶ್ರೀಮತಿ ಶೃತಿ.
ಮೋಡಗಳು ನೀರನ್ನು ತುಂಬಿಕೊಂಡು ಪಕ್ವವಾದಾಗ ಸ್ವಯಂಪ್ರೇರಣೆಯಿಂದ ನೀರನ್ನು ಸುರಿಸುತ್ತವೆ. ಆಕಳು ಹೋಗಿ ಹುಲ್ಲು-ಹಿಂಡಿಗಳನ್ನು ತಿಂದು ಕೆಚ್ಚಲಿನಲ್ಲಿ ಹಾಲನ್ನು ತುಂಬಿಕೊಳ್ಳುವುದು. ಆದರೆ ಅದನ್ನು ಯಾರಾದರೂ ಹಿಂಡಿಕೊಳ್ಳಲಿ ಎಂದು ಕಾಯುವುದು. ಯಾರಾದರೂ, ಹಿಂಡಿಕೊಂಡಾಗ ಸಂತೋಷದಿಂದ ಕೊಡುವುದು. ಅದೇ ರೀತಿ ದಾನಿಗಳಲ್ಲಿ ಎರಡು ಪ್ರಕಾರ, ಕೆಲವರು ಯಾರಾದರೂ ಕೇಳಿದಾಗ ಸಲ್ಲಿಸುವವರು. ಇನ್ನೂ ಕೆಲವರು ತಾವೇ ತಿಳಿದು, ಸ್ವಯಂಪ್ರೇರಣೆಯಿಂದ ಕೊಡುವವರು.
ಶರಣ ಪುನೀತ್ ಬನ್ನಹಳ್ಳಿ, ಶರಣೆ ಶ್ರೀಮತಿ ಶೃತಿ ರವರು ಎರಡನೆಯ ಪ್ರಕಾರದ ದಾನಿಗಳು ನಮ್ಮಗಳ ಸಾಹಸದ ಬಸವ ಪುತ್ತಳಿ ನಿರ್ಮಾಣದ ವಿಚಾರ ಕೇಳುತ್ತ ಕೇಳುತ್ತ ಸ್ವಯಂಪ್ರೇರಣೆಯಿಂದ ಶ್ರೀ ಬಸವೇಶ್ವರ ಕಂಚಿನ ಪುತ್ತಳಿ ನಾನೇ ಮಾಡಿಸಿ ಕೊಡುತ್ತೇನೆ ಎಂದು 20 ಲಕ್ಷ ನೀಡಿ ದೊಡ್ಡ ಮಟ್ಟದ ಸೇವೆ ಮಾಡಿದರು..
ಸಕಲೇಶಪುರ ತಾಲೂಕಿನ ಬನ್ನಹಳ್ಳಿ ಗ್ರಾಮದ ಶ್ರೀ ಪುಟ್ಟಸ್ವಾಮಿಗೌಡ ಶ್ರೀಮತಿ ಹೂವಮ್ಮ ದಂಪತಿಗಳ ಪುತ್ರರಾಗಿ 24/01/ 1990ರಲ್ಲಿ ಜನಿಸಿದ ಭುವನಾಕ್ಷ ನಂತರ ಎಲ್ಲರ ಪ್ರೀತಿಯ ಪುನೀತ್ ಅದರು.
‘ಇವರೇನು ಬಹಳಷ್ಟು ಇದ್ದುಳ್ಳವರಾಗಿರಲಿಲ್ಲ’ ತಂದೆ ತಾಯಿಯನ್ನು ಕಳೆದುಕೊಂಡು ತುಂಬಾ ಪರಿಶ್ರಮದಿಂದ ಮುಂದೆ ಬಂದದವರು, ಪೂಜಾನಿಷ್ಠರು, ಜೊತೆಗೆ ದಾಸೋಹಂಭಾವ ಸಂಪನ್ನರು.. ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆ ಕಾರ್ಯಕ್ರಮದ ಸಂಪೂರ್ಣ ದಾಸೋಹವನ್ನು ನಡೆಸಿಕೊಟ್ಟವರು.
ಇಷ್ಟೊಂದು ದೊಡ್ಡ ಮಟ್ಟದ ಸೇವೆಯನ್ನು ಸಲ್ಲಿಸಿದಾಗ ನಿಮಗೆ ಒಂದು ಗೌರವ ಸನ್ಮಾನ ನಡೆಸಿದಾಗ ನಮ್ಮೆಲ್ಲರ ಮುಖದ ಮೇಲೆ ಆತ್ಮ ಸಂತೃಪ್ತಿ, ಉತ್ಸಾಹ, ನಿಮ್ಮ ಹಣ ಸಾರ್ಥಕವಾಯಿತು ಎಂಬ ಧನ್ಯವಾದ ನಮ್ಮೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಮನುಷ್ಯ ಬಾಳುವುದು ಹಲವಾರು ವರ್ಷಗಳು ಅದರಲ್ಲಿ ಸಾರ್ಥಕವೆನಿಸಿಕೊಳ್ಳುವ ಕೇವಲ ಕೆಲವೇ ಕೆಲವು ಕ್ಷಣಗಳು ಅದೇ ರೀತಿಯಲ್ಲಿ ಗಳಿಸುವುದು ಎತೇಚ್ಛ ಹಣವನ್ನು ಅದು ಸಾರ್ಥಕ ಗೊಳ್ಳುವುದು ಕೆಲವೇ ಕೆಲವು ಬಾರಿ ಸಾರ್ಥಕ ಕಾರ್ಯಕ್ಕೆ ಬಂದಾಗ ಇಂಥ ಭಾವದಂಪತಿಗಳ ಮುಖದ ಮೇಲು ಪಡಿಮುಡಿತ್ತು.
ನಿಮ್ಮ ಸಮಸ್ತ ಕುಟುಂಬದವರಿಗೆ ಆಯುರ್ ಆರೋಗ್ಯ ಭಾಗ್ಯವನ್ನು ಆನಂದದಾಯಕ ಭವಿಷ್ಯವನ್ನು ದಯಪಾಲಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಯಡೇಹಳ್ಳಿ ಆರ್ ಮಂಜುನಾಥ್