ಸಕಲೇಶಪುರದ ತಾಲೂಕು ವರ್ತಕರ ಸಂಘ ಹಾಗೂ ಯೋಗ ಚೇತನ್ ಟ್ರಸ್ಟ್ ವತಿಯಿಂದ ಹತ್ತನೇ ವರ್ಷದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದಂತಹ ಭಾಗೀರಥಿ ಮುರುಳ್ಯ ಅವರು ಭಾಗವಹಿಸಿದ್ದರು.
ತಾಲೂಕು ವರ್ತಕರ ಸಂಘ ಹಾಗೂ ಯೋಗ ಚೇತನ ಟ್ರಸ್ಟ್ ವತಿಯಿಂದ ಶಾಸಕರು ಮತ್ತು ನಿವೃತ್ತ ಸೈನಿಕರಾದ ರಾಮೇಗೌಡರು ಮತ್ತು ಲಕ್ಷ್ಮಣ ಗೌಡರನ್ನು ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ತಾಲೂಕು ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಎಚ್ ಎಚ್ ಉದಯ್ ಹಾಗೂ ಯೋಗ ಚೇತನ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಎಸ್ಎಂ ಲಕ್ಷ್ಮೀ ರಂಗನಾಥ್ ಅವರು ಹಾಜರಿದ್ದರು.
ಲಕ್ಷ್ಮಣ್ ಕೀರ್ತಿ ಅವರು ಸ್ವಾಗತಿಸಿದರು
ಜಗದೀಶ್ ಅವರು ವಂದನಾರ್ಪಣೆ ಮಾಡಿದರು. ವಿಠ್ಠಲ್ ರವರು ನಿರೂಪಣೆ ಮಾಡಿದರು.