23.06.2024ರ ಭಾನುವಾರ ಸಕಲೇಶಪುರದ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮಾಜಿ ಮುಖ್ಯಮಂತ್ರಿಗಳು ಬಿಎಸ್ ಯಡಿಯೂರಪ್ಪನವರು ಆಗಮಿಸುತ್ತಿದ್ದಾರೆ.
13- 06-2024ರ ಗುರುವಾರದಂದು ಸಕಲೇಶಪುರದಲ್ಲಿ ಲೋಕಾರ್ಪಣೆಗೊಂಡ ಶ್ರೀ ಬಸವೇಶ್ವರ ಪುತ್ತಳಿ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಾಗಿ ಶ್ರೀ ಬಿ ಎಸ್ ಯಡಿಯೂರಪ್ಪನವರು ಆಗಮಿಸಬೇಕಾಗಿತ್ತು. ಕಾರಣಾಂತರಗಳಿಂದ ಯಡಿಯೂರಪ್ಪನವರು ಆಗಮಿಸಲಾಗಿರಲಿಲ್ಲ ಶ್ರೀಯುತರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತ್ತು.
ಹಾಗಾಗಿ ವಿಶೇಷ ಆಸಕ್ತಿಯನ್ನು ತಳೆದು ಭಾನುವಾರ ಅಂದರೆ 23 6 2024 ರಂದು ಮಧ್ಯಾಹ್ನ 1:30ಕ್ಕೆ ಸಕಲೇಶಪುರಕ್ಕೆ ಆಗಮಿಸಿ ನೂತನವಾಗಿ ಲೋಕಾರ್ಪಣೆಗೊಂಡಿರುವ ಶ್ರೀ ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ..
ಸರ್ವರನ್ನು ಸುಸ್ವಾಗತಿಸುವ
ಮಲೆನಾಡು ವೀರಶೈವ ಸಮಾಜ(ರಿ)ಮತ್ತು ಅಂಗ ಸಂಸ್ಥೆಗಳು ಹಾಗೂ ಶ್ರೀ ಬಸವೇಶ್ವರ ಪುತ್ಥಳಿ ನಿರ್ಮಾಣ ಸಮಿತಿ ಸಕಲೇಶಪುರ.