ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವೀಡಿಯೊಗಳನ್ನು ಪೆನ್ ಡ್ರೈವ್ ಮೂಲಕ ಜನರಿಗೆ ಹಂಚಿಕೆ ಮಾಡಿರುವ ಆರೋಪದ ಮೇಲೆ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧವೂ ಬೆಂಗಳೂರಿನ ಸಿಐಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರೀತಂ ಗೌಡ ಸಹಚರರಾದ ಶರತ್ ಹಾಗೂ ಕಿರಣ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಪ್ರಜ್ವಲ್ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದಿಂದ ಎಸ್ ಐಟಿ 4 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದೆ.
ಎಫ್ಐಆರ್ ದಾಖಲಾದ ಹಿನ್ನಲೆ ಪ್ರೀತಂ ಗೌಡ ಯಾವ ಕ್ಷಣದಲ್ಲಾದರೂ ಬಂಧನವಾಗುವ ಸಾಧ್ಯತೆಯಿದೆ.ಕಸ್ಟಡಿ ವಿಚಾರಣೆ ವೇಳೆ ನ್ಯಾಯಾಧೀಶರು, ಪ್ರಜ್ವಲ್ ಗೆ ಗುಣಮಟ್ಟದ ಆಹಾರ ನೀಡಲು ಸೂಚನೆ ನೀಡಿದ್ದಾರೆ. ಪ್ರೀತಂಗೌಡ ವಿರುದ್ಧ ದಾಖಲಾದ ಪ್ರಕರಣದ ಪ್ರತಿಯನ್ನು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ ಪ್ರೀತಂ ಗೌಡ ಎಫ್ಐಆರ್ ದಾಖಲಾದ ಬಗ್ಗೆ ತನಗೇನೂಮಾಹಿತಿಯಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.