ಸಕಲೇಶಪುರ ತಾಲ್ಲೂಕು ಧಾರ್ಮಿಕ ದತ್ತಿ ಇಲಾಖೆ ನಿರ್ವಹಣೆಯಲ್ಲಿ ವಿಫಲರಾಗಿರುವ ತಹಶೀಲ್ದಾರ್
ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು ಸಕಲೇಶಪುರ ಹಿಂದೂಗಳ ಆರಾಧ್ಯ ದೈವ ಗಡಿ ಚೌಡೇಶ್ವರಿ ದೇವಸ್ಥಾನ. ಈ ದೇವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ರಕ್ಷಣೆ, ಭಕ್ತರ ಸಂರಕ್ಷಣೆ ಮಾಡುವುದು ಅನೇಕ ಭಕ್ತರಿಗೆ ಒಳಿತನ್ನು ಮಾಡುವ ಅನೇಕ ಉದಾಹರಣೆಗಳಿವೆ.
ಗಡಿ ಚೌಡೇಶ್ವರಿ ಈ ದೇವಿಯ ದೇವಸ್ಥಾನದ ಪರಿಸರದಲ್ಲಿ ಮೋಜು ಮಸ್ತಿ ಮಾಡಿ ಪರಿಸರ ಹಾಳು ಮಾಡುತ್ತಿರುವವರ ಬಗ್ಗೆ ಧಾರ್ಮಿಕ ದತ್ತಿ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಆಗಿರುವ ತಹಶೀಲ್ದಾರ್ ಯಾವುದೇ ಕ್ರಮ ವಹಿಸದೆ ಅಕ್ರಮಕ್ಕೆ ಇವರೇ ಪುಷ್ಟಿ ಕೊಡುತ್ತಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಅಕ್ರಮ ಮದ್ಯ ಹಾಗೂ ಮೋಜುಮಸ್ತಿಗೆ ಅವಕಾಶ ನೀಡಬಾರದು ಎಂದು ತಹಶೀಲ್ದಾರ್’ಗೆ ಖಡಕ್ ನಿರ್ದೇಶನ ನೀಡಬೇಕು ಎಂದು ಬಜರಂಗದಳ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೇವಲ ಹುಂಡಿ ಹಣ ಮಾತ್ರ ತಹಶೀಲ್ಧಾರ್ ಅವರ ಜವಾಬ್ದಾರಿ ಅಲ್ಲ ದೇವಸ್ಥಾನ ಮತ್ತು ದೇವಸ್ಥಾನ ಆವರಣದಲ್ಲಿ ನಡಿಯುವ ಅವ್ಯವಸ್ಥೆ, ಶುಶಿತ್ವ, ದೇವಸ್ಥಾನಕ್ಕೆ ಬೇಕಾಗುವ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು ಎಂಬುದನ್ನ ತಿಳಿಸಬೇಕು. ಎಂದು ಆರೋಪಿಸಿದ್ದಾರೆ.
ಗಡಿ ದೇವಸ್ಥಾನದಲ್ಲಿ 2 ದಿನದ ಹಿಂದೆ ನಡೆದಿರುವ ಮೋಜು ಮಸ್ತಿಯಿಂದ ಪೂಜೆಗೆಂದು ಬಂದ ಭಕ್ತರಿಗೆ ತೊಂದರೆ ಆಗಿದೆ ತಾಲ್ಲೂಕಿನ ಆಡಳಿತ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.
ಸಕಲೇಶಪುರ ಜನರ ಆರಾಧ್ಯ ದೈವ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಲಕ್ಷದಿಂದ ದೇವಸ್ಥಾನದ ಪಾವಿತ್ರತೆ ಹಾಳಾಗುತ್ತಿದ್ದು ಸರಿಯಾದ ವ್ಯವಸ್ಥೆಯನ್ನು ಭಕ್ತರಿಗೆ ಕಲ್ಪಿಸದೆ ಹಾಗೂ ದೇವಸ್ಥಾನದ ಅಭಿವೃದ್ಧಿಗೂ ಸಹಕರಿಸದ ತಹಶೀಲ್ಧಾರ್ ಕೇವಲ ಹುಂಡಿ ಹಣಕ್ಕಾಗಿ ಸಮಿತಿ ಕಾರ್ಯದರ್ಶಿ ಆಗಿದ್ದರೆ ಎಂಬ ಅನುಮಾನ ಮೂಡುತಿದೆ.
ಕೇವಲ ಹುಂಡಿ ಹಣ ಎಣಿಕೆಗೆ ಸೀಮಿತವಾದ ತಾಲ್ಲೂಕು ಆಡಳಿತ ಅಭಿವೃದ್ಧಿ ಜೀರ್ಣೋದ್ಧಾರಕ್ಕೆ ಒತ್ತು ನೀಡುತ್ತಿಲ್ಲ.
ತಹಶೀಲ್ದಾರ್ ಬ್ರಹ್ಮ ಕಳಸ ಬಗ್ಗೆ ಚಕಾರ ಎತ್ತದೆ ಭಕ್ತರ ಭಾವನೆ ಜೊತೆ ಚೆಲ್ಲಾಟ ಆಡುತಿದ್ದು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ದೇವಸ್ಥಾನದ ಬಗ್ಗೆ ನಿರ್ಲಕ್ಷ ತೋರದೆ ಜನರ ಹಿತಕ್ಕಾಗಿ ಕೆಲಸ ಮಾಡಬೇಕೆಂಬ ವಿಷಯ ತಾಲ್ಲೂಕು ಆಡಳಿತ ಮತ್ತು ತಹಶೀಲ್ದಾರ್ ಅವರ ಗಮನಕ್ಕೆ ತರಬೇಕು ಮತ್ತು ಸೂಕ್ತ ನಿರ್ದೇಶನ ನೀಡಬೇಕು ಎಂದು ಉಪವಿಭಾಗಾಧಿಕಾರಿಗಳಿಗೆ
ಗಡಿ ಚೌಡೇಶ್ವರಿ ದೇವಿಯ ಭಕ್ತರು – ಬಜರಂಗದಳ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ..