ಸಕಲೇಶಪುರ ತಾಲ್ಲೂಕಿನಲ್ಲಿ ನಾಡಪ್ರಭು ಬೆಂಗಳೂರು. ಕೆಂಪೇಗೌಡ ರವರ 515ನೇ ಜನ್ಮ ಜಯಂತೋತ್ಸವ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ಒಕ್ಕಲಿಗ ಸಂಘದ ವತಿಯಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಕೆಂಪೇಗೌಡ ರವರ ಜಯಂತೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಕಲೇಶಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಸಿಮೆಂಟ್ ಮಂಜು ಉಪವಿಭಾಗಾಧಿಕಾರಿ ಶ್ರುತಿ, ತಹಸೀಲ್ದಾರ್ ಮೇಘನಾ, ಡಿ. ವೈ ಎಸ್. ಪಿ ಪ್ರಮೋದ್ ಕುಮಾರ್, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಎಚ್. ಕುಮಾರಸ್ವಾಮಿ, ಸಮಾಜ ಸೇವಕ ಪ್ರತಾಪ್ ಗೌಡ ಬಾಚಿಹಳ್ಳಿ, ಇಓ ರಾಮಕೃಷ್ಣ ಬಿ.ಇ.ಓ ಪುಷ್ಪ, ಕೆಜಿಎಫ್ ಅಧ್ಯಕ್ಷ ಮೋಹನ್ ಕುಮಾರ್,ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ನಂದಿ ಕೃಪಾ ರಾಜು,
ಮಹಿಳಾ ಘಟಕದ ಅಧ್ಯಕ್ಷೆ ವಸಂತ, ನಾಡು ಪ್ರಭು ಕೆಂಪೇಗೌಡ ಯುವ ವೇದಿಕೆ ವಿಶಾಲ್,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಉದಯ್,ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್(ದಿವಾನ್), ವಲಯ ಅರಣ್ಯಾಧಿಕಾರಿ ಶಿಲ್ಪಾ, ಪುರಸಭಾ ಮುಖ್ಯಾಧಿಕಾರಿ ರಮೇಶ್ ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ತಾಲ್ಲೂಕಿನ ಎಲ್ಲಾ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು