ನಮ್ಮ ಭಾರತ ದೇಶದ ಕರೆನ್ಸಿಯ ವಿಚಾರದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬೆಳವಣಿಗೆ ಹಾಗು ಬದಲಾವಣೆಗಳು ಕಂಡುಬಂದಿರೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಹೌದು 2016ರಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಳೆಯ ನೋಟುಗಳು ಬ್ಯಾನ್ ಆದ ನಂತರ ಹೊಸ 2000 500 ರೂಪಾಯಿ ನೋಟುಗಳು ಜಾರಿಗೆ ಬಂದಿದ್ದವು ಆದರೆ ಈಗ ಮತ್ತೆ ಎರಡು ಸಾವಿರ ರೂಪಾಯಿ ನೋಟು ಬ್ಯಾನ್ ಆಗಿರೋದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸದ್ಯದ ಮಟ್ಟಿಗೆ ಭಾರತದ ಮಾರುಕಟ್ಟೆಯಲ್ಲಿ ಕರೆನ್ಸಿಯ ವಿಚಾರಕ್ಕೆ ಬಂದರೆ ಐನೂರು ರೂಪಾಯಿ ನೋಟು (500 Rupee Note) ಅತ್ಯಂತ ದೊಡ್ಡ ಮುಖಬೆಲೆಯನ್ನು ಹೊಂದಿರುವಂತಹ ನೋಟ್ ಆಗಿದೆ.ಇನ್ನು ಇತ್ತೀಚಿನ ದಿನಗಳಲ್ಲಿ ಪ್ರತಿ ಅಂಗಡಿಯಲ್ಲಿ ಅಥವಾ ಯಾವುದೇ ಕಡೆಗಳಲ್ಲಿ ಹೋದರು ಕೂಡ ವ್ಯಾಪಾರಿಗಳು ಗ್ರಾಹಕರಿಂದ 10 ಹಾಗೂ 20 ರೂಪಾಯಿಗಳ ನಾಣ್ಯವನ್ನು ಪಡೆದುಕೊಳ್ಳುವಂತಹ ಕೆಲಸವನ್ನು ಮಾಡ್ತಾ ಇಲ್ಲ ಅವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ10 ಹಾಗೂ 20 ರೂಪಾಯಿ ನಾಣ್ಯಗಳು (10 & 20 Rupee Coin) ವ್ಯಾಲಿಡ್ ಆಗಿಲ್ಲ ಎನ್ನುವ ರೀತಿಯಲ್ಲಿ ಪ್ರತಿಯೊಬ್ಬರೂ ಕೂಡ ವರ್ತಿಸುತ್ತಿದ್ದಾರೆ ಹೀಗಾಗಿ ಈ ರೀತಿಯ ತಪ್ಪು ಕೆಲಸವನ್ನು ಮಾಡೋದಕ್ಕೆ ಹೋಗಬೇಡಿ ಭಾರತ ಸರ್ಕಾರದಿಂದ ಪ್ರಮಾಣಿಕೃತವಾಗಿರುವಂತಹ ಕರೆನ್ಸಿ ಆಗಿದೆ ಎನ್ನುವುದಾಗಿ ಪ್ರತಿಯೊಬ್ಬ ಅಧಿಕಾರಿಗಳು ಕೂಡ ಈ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ಈ ನಾಣ್ಯಗಳನ್ನು ನೀವು ಒಂದು ವೇಳೆ ತಿರಸ್ಕರಿಸುತ್ತಿದ್ದರೆ ಅದು ಕಾನೂನು ಪ್ರಕಾರವಾಗಿ ಅಪರಾಧ ಆಗಿರುತ್ತದೆ ಎನ್ನುವಂತಹ ಎಚ್ಚರಿಕೆಯನ್ನು ಕೂಡ ಈ ವಿಚಾರದಲ್ಲಿ ರವಾನಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹತ್ತು ರೂಪಾಯಿ ನಾಣ್ಯವನ್ನು ಅಮಾನ್ಯ ಎಂಬುದಾಗಿ ಪರಿಗಣಿಸಲಾಗಿದ್ದು ಇದು ನಕಲಿ ಎನ್ನುವ ರೀತಿಯಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಸುದ್ದಿಗಳನ್ನು ಹರಿ ಬಿಡಲಾಗುತ್ತಿದ್ದು ಇದೇ ವಿಚಾರದಿಂದಾಗಿ ಜನರಲ್ಲಿ ಇದರ ಬಗ್ಗೆ ಅಪನಂಬಿಕೆ ಹುಟ್ಟಿಕೊಳ್ಳುತ್ತಿದೆ.
ಭಾರತ ಸರ್ಕಾರ ಅನುಮೋದಿಸಿರುವಂತಹ ಈ 10 ಹಾಗೂ 20 ರೂಪಾಯಿ ನಾಣ್ಯಗಳು ಪ್ರಮಾಣಿಕರು ತಿಳ್ಕೊಂಡಿರುವಂತಹ ಕರೆನ್ಸಿ ಗಳಾಗಿವೆ ಹಾಗೂ ಅವುಗಳನ್ನು ತಿರಸ್ಕರಿಸುವುದಕ್ಕೆ ಯಾರಿಗೂ ಕೂಡ ಹಕ್ಕು ಇರೋದಿಲ್ಲ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ ಒಂದು ವೇಳೆ ಇದನ್ನ ಮೀರಿ ಕೂಡ ಯಾರಾದ್ರೂ ಈ ರೀತಿಯ ಕೆಲಸವನ್ನು ಮಾಡಿದ್ರೆ ಆ ಸಂದರ್ಭದಲ್ಲಿ ನೀವು ಐಪಿಸಿ ಸೆಕ್ಷನ್ 124 ಎ ಪ್ರಕಾರ ಅವರ ವಿರುದ್ಧ ದೂರನ್ನು ದಾಖಲಿಸಬಹುದಾಗಿದೆ. ಈ ವಿಚಾರದಲ್ಲಿ ಶಿಕ್ಷೆಯ ರೂಪದಲ್ಲಿ ಮೂರು ವರ್ಷಗಳವರೆಗೆ ಜೈಲಾಗುವಂತಹ ಸಾಧ್ಯತೆ ಕೂಡ ಇರುತ್ತದೆ.