ಭರವಸೆಯ ನಾಯಕ ವೈ ಡಿ ಬಸವರಾಜು.
ನೇರ ನುಡಿ, ನಿಷ್ಠೂರ ಮಾತು ಹಾಗೂ ಹಿಡಿದ ಕೆಲಸ ಪಟ್ಟು ಬಿಡದೆ ಪೂರ್ಣಗೊಳಿಸುವ ಹಠವಾದಿ ಸ್ವಭಾವ.
ಒಂದು ಮುಖವನ್ನು ಇಟ್ಟುಕೊಂಡೆ ಈ ಚಕ್ರವ್ಯೂಹದಂತ ಬದುಕಿನಲ್ಲಿ ಸಾಧನೆಗಳನ್ನು ಸಾಕಾರಗೊಳಿಸುವುದು ಕಷ್ಟ ಸಾಧ್ಯವಿರುವಾಗ ಬಹುಮುಖಿಯಾಗಿ ಸೇವಾ ತತ್ವರಾಗುವುದು ಅಸಮಾನ್ಯವಾದದ್ದು. ಒಂದೊಂದು ಮುಖಗಳಲ್ಲಿಯೂ ಅಳಿಲು ಸೇವೆಯ ಮಳಲ ಭಕ್ತಿಯನ್ನು ಅರ್ಪಿಸುತ್ತಾ “ಇವನಾರವ ಇವನಾರವ ಎಂದೆಣಿಸದೆ ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ” ಎಂಬ ಬಸವವಾಣಿಯಂತೆ ಸಮಾಜ ಸೇವೆಯಂತಹ ಕಾರ್ಯಶೀಲತೆಯಲ್ಲಿ ತೊಡಗಿಸಿಕೊಂಡು ಬಹುಮುಖವಾಗಿ ಸೇವೆ ಸಲ್ಲಿಸುತ್ತಿರುವ ಭರವಸೆಯ ನಾಯಕ ಯಡೇಹಳ್ಳಿ ಬಸವಣ್ಣ.
ಕಾಲೇಜು ದಿನಗಳಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಬೆಳೆದ ವೈ ಡಿ ಬಸವಣ್ಣ ಸದಾ ಇವರೋಟ್ಟಿಗೆ ನೂರಾರು ಯುವಕರ ತಂಡವಿರುತ್ತಿತ್ತು.. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಬಾಳ್ಳುಪೇಟೆ ಎಂಬ ಪ್ರಭಾವಿ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಬಹುದು ಎಂಬುದನ್ನು ರೂಪಿಸಿದ ನಾಯಕ. ಬಾಳ್ಳುಪೇಟೆ ಹಾಗೂ ಸುತ್ತಮುತ್ತಲ ನೂರಾರು ಉತ್ಸಾಹಿ ಯುವಕರ ತಂಡ ಕಟ್ಟಿಕೊಂಡು ಬಾಳ್ಳುಪೇಟೆ ಯುವಸೇನೆ ಸಂಘಟನೆ ಹುಟ್ಟು ಹಾಕಿ, ಕನ್ನಡ ರಾಜ್ಯೋತ್ಸವ, ಸರಳ ಸಾಮೂಹಿಕ ವಿವಾಹಗಳು, ಕ್ರೀಡಾಕೂಟಗಳು, ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಶ್ರೀ ಗಣಪತಿ ಪ್ರತಿಷ್ಠಾಪನೆ ಉತ್ಸವ ಹೀಗೆ ನೂರಾರು ಕಾರ್ಯಕ್ರಮಗಳನ್ನು ನೆರವೇರಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.. ತಮ್ಮ ನೇತೃತ್ವದಲ್ಲಿ ಹಲವಾರು ವ್ಯಾಜ್ಯಗಳ ತೀರ್ಮಾನ ಸಂಕಷ್ಟದಲ್ಲಿರುವವರಿಗೆ ನೆರವು ನೀಡಿದಂತಹ ನೂರಾರು ಉದಾಹರಣೆಗಳಿವೆ. ಮಧ್ಯಮ ವರ್ಗದ ಕುಟುಂಬದವರಿಗೆ ಕಷ್ಟ ಎಂದಾಗ ಮೊದಲು ನೆನಪಿಗೆ ಬರುವುದು ಇದೇ ಯಡೇಹಳ್ಳಿ ಬಸವಣ್ಣ
ಧಾರ್ಮಿಕ ಕಾರ್ಯಕ್ರಮಗಳಿಗೆ ದಾಸೋಹದ ವ್ಯವಸ್ಥೆ, ಕ್ರೀಡಾಕೂಟಗಳಿಗೆ ಬಹುಮಾನದ ವ್ಯವಸ್ಥೆ, ಸರ್ಕಾರಿ ಶಾಲೆಗಳಿಗೆ ನೆರವು, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಸಹಾಯ, ದೇವಸ್ಥಾನ ನಿರ್ಮಾಣಕ್ಕೆ ಸಹಕಾರ, ಯಾರನ್ನು ಎಂದು ಹಾಗೆ ಕಳಿಸಿದ ಉದಾಹರಣೆಗಳಿಲ್ಲ.
25 ವರ್ಷಗಳ ಹಿಂದೆ ಬೃಹತ್ ಕನ್ನಡ ರಾಜ್ಯೋತ್ಸವ ಸಾರ್ವಜನಿಕ ಸಮಾರಂಭದಲ್ಲಿ ಮೊಟ್ಟ ಮೊದಲಿಗೆ ನನಗೆ ಪ್ರಾಸ್ತಾವಿಕ ನುಡಿಯ ಭಾಷಣ ಮಾಡುವ ವೇದಿಕೆ ಕಲ್ಪಿಸಿದ್ದು ಇದೆ ವೈ ಡಿ ಬಸವರಾಜು.. ನೂರಾರು ಪೊಲೀಸ್ ಠಾಣೆಗೆ ಹೋಗುವ ಪ್ರಕರಣಗಳನ್ನು ತೀರ್ಮಾನ ಮಾಡಿದ ಖ್ಯಾತಿ ಶ್ರೀಯುತರದು, ಹೊರ ಊರುಗಳಲ್ಲಿ ಹೊರ ರಾಜ್ಯಗಳಲ್ಲಿ ಮರಣ ಹೊಂದಿದ ಹತ್ತಾರು ಸ್ಥಳೀಯ ಯುವಕರುಗಳ ಪಾರ್ಥಿವ ಶರೀರವನ್ನು ತರುವಲ್ಲಿ ಅವಿರತ ಶ್ರಮವಹಿಸಿದ್ದು ನಾನು ಕಣ್ಣಾರೆ ಕಂಡಿದ್ದೇನೆ.
ರಾಜಕೀಯವಾಗಿ ಆಸಕ್ತಿ ಹೊಂದಿದ್ದ ವೈ ಡಿ ಬಸವರಾಜ ರವರು ಜಿಲ್ಲಾ ಪಂಚಾಯತಿ ಸದಸ್ಯರಾಗಿ ಯಾವತ್ತೋ ಆಯ್ಕೆ ಆಗಬಹುದಿತ್ತು, ಎಲ್ಲೋ ಒಂದು ಕಡೆ ಇವರಿಗೆ ಅನ್ಯಾಯವಾಗಿದೆ ಎಂದು ನನಗನಿಸುತ್ತದೆ. ಜೊತೆಗೆ ತಾಲೂಕು ಪಂಚಾಯಿತಿ 2016ರ ಚುನಾವಣೆಯಲ್ಲಿ ವೈ ಡಿ ಬಸರಾಜ್ರವರೇ ಅಭ್ಯರ್ಥಿಯಾಗಬಹುದಿತ್ತು ಅದರೆ ನನಗೆ ಕ್ಷೇತ್ರ ಬಿಟ್ಟುಕೊಟ್ಟು ಸಹಕರಿಸಿದ್ದು ಇವರ ಉದಾರ ಗುಣಗಳಲ್ಲೊಂದು.
ಒಟ್ಟಿನಲ್ಲಿ ಎದೆಗಾರಿಕೆ ಇರುವ ಒಬ್ಬ ಸಾಮಾನ್ಯ ಕುಟುಂಬದ ನಾಯಕ ಸಮಾಜ ಸೇವೆಗಳಂತ ಸಾಮಾಜಿಕ ಬದಲಾವಣೆಯ ಕ್ರಿಯಾ ಸಮಿತಿಯನ್ನು ಒಳಗೊಂಡು ವಿವಿಧ ಸೇವೆಗಳಲ್ಲಿ ಹೆಚ್ಚಿನ ವ್ಯಕ್ತಿತ್ವವನ್ನು ಸಾರುತ್ತ ಬಹುಜನ ಉಪಕಾರಿಯಾಗಿ ಬೆಳೆಯುವಂತಾಗಲಿ ರಾಜಕೀಯದಲ್ಲಿ ಉನ್ನತ ಸ್ಥಾನಗಳು ದೊರೆಯಲಿ ಎಂಬುದು ನಮ್ಮ ಹಾರೈಕೆಯಾಗಿದೆ.
ಯಡೇಹಳ್ಳಿ ಆರ್ ಮಂಜುನಾಥ್