ಚಂದಾ ಎತ್ತಿ ಹದಗೆಟ್ಟ ಗ್ರಾಮದ ರಸ್ತೆಯನ್ನು ರಿಪೇರಿ ಮಾಡಿದ ಊರಿನವರು
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬುಗಡಹಳ್ಳಿ ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ಈ ಬಗ್ಗೆ ಅನೇಕ ಸಲ ದೂರು ನೀಡಿದರೂ ಜನಪ್ರತಿನಿಧಿಗಳು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆ ಮನೆಗೆ ಹೋಗಿ ಹಣ ಸಂಗ್ರಹಿಸಿ ರಸ್ತೆ ರಿಪೇರಿ ಮಾಡಿದರು
ಗ್ರಾಮದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆ ಇಲ್ಲದೆ ತಮ್ಮ ಊರಿಗೆ ಹೋಗಲು ಗ್ರಾಮಸ್ಥರು ಪರದಾಡುತ್ತಿದ್ದಾರೆ
. ಶಾಲೆಗೆ ತೆರಳಲಾಗದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಬುಗಡಹಳ್ಳಿ ಗ್ರಾಮ ಸಕಲೇಶಪುರ ಪಟ್ಟಣದಿಂದ 13 ಕಿಮೀ ದೂರದಲ್ಲಿದೆ.
ಈ ಗ್ರಾಮದಲ್ಲಿ 26 ಮನೆಗಳಿದ್ದು, 150 ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಜನರು ರಸ್ತೆ ಇಲ್ಲದೆ ಪರದಾಡುತ್ತಿದ್ದಾರೆ.
ಬುಗಡಹಳ್ಳಿ ಗ್ರಾಮಕ್ಕೆ ತಲುಪಲು ಇರುವ ಏಕೈಕ ರಸ್ತೆ ಮಳೆಯಿಂದ ಸಂಪೂರ್ಣ ಕೆಸರುಗದ್ದೆಯಾಗಿದೆ.
ವಾಹನಗಳು ಓಡಾಡಲು ಸಾಧ್ಯವಾಗದೆ ಕಾಲ್ನಡಿಗೆಯಲ್ಲಿ ಗ್ರಾಮಸ್ಥರು ತೆರಳುತ್ತಿದ್ದಾರೆ
ಎರಡು ಕಿಲೋಮೀಟರ್ ರಸ್ತೆಯಲ್ಲಿ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು,
ರಸ್ತೆ ಸಂಪರ್ಕವಿಲ್ಲದೆ ಗ್ರಾಮದೊಳಕ್ಕೆ ವಾಹನಗಳು ಹೋಗುತ್ತಿಲ್ಲ
ಬುಗಡಹಳ್ಳಿ ಗ್ರಾಮದ ರಸ್ತೆ ನಿರ್ಮಿಸುತ್ತವಂತೆ ಗ್ರಾಮಸ್ಥರು ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಅವರು ಮಾತ್ರ ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಇನ್ನು ರಸ್ತೆ ನಿರ್ಮಾಣಕ್ಕೆ ಅನುದಾನ ಕೊಡದ ಸರ್ಕಾರದ ನಡೆಗೆ ಜನರ ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಗ್ರಾಮಸ್ಥರು ತಾವೆ ಒಂದು ಉಪಾಯ ಕಂಡುಕೊಂಡಿದ್ದು, ಪ್ರತಿ ಮನೆಯಿಂದ 2-3 ಸಾವಿರದಂತೆ ಚಂದಾ ಎತ್ತಿ ರಸ್ತೆ ನಿರ್ಮಿಸಿದ್ದಾರೆ.
ಟಿಪ್ಪರ್ ವಾಹನದಲ್ಲಿ ಜಲ್ಲಿಕಲ್ಲು ತರಿಸಿ ರಸ್ತೆಗೆ ಸುರಿದು ಗ್ರಾಮಸ್ಥರು ತಾವೇ ರಸ್ತೆ ನಿರ್ಮಿಸಿಕೊಂಡಿದ್ದಾರೆ.
ú
ಇನ್ನಾದರೂ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದರು.
ಚoದ್ರು ಬುಗುಡಹಳ್ಳಿ (ವರ್ತಕರು)
ಜನಪ್ರತಿನಿಧಿಗಳು ಗ್ರಾಮದ ಕಟ್ಟ ಕಡೆಯವರನ್ನು ತಲುಪುವುದು ಇಂತಹ ರಸ್ತೆಗಳಲ್ಲಿ ಯಾವಾಗ ಎಂದರೆ ಚುನಾವಣೆ ಸಮದಲ್ಲಿ ಮಾತ್ರ.. ಮೂಲಭೂತ ಸೌಕರ್ಯವಿಲ್ಲದ ಇಂತಹ ಊರಿನ ಜನರ ಬಳಕೆ ಮತದಾನಕ್ಕೆ ಮಾತ್ರ ಸೀಮಿತವಾಗಿದೆ..
ಸುನಿಲ್ ರಾಜ್ ಬುಗುಡಹಳ್ಳಿ
ಪರಿಸ್ಥಿತಿಯಲ್ಲಿ ವೃದ್ಧರು ಮಕ್ಕಳು ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವೇ ಇಲ್ಲ ಯಾವ ವಾಹನವು ಈ ಕೆಟ್ಟ ರಸ್ತೆಯಲ್ಲಿ ಊರಿನ ಒಳಗೆ ಬರುವುದಿಲ್ಲ, ನಾವು ಯಾವ ಶತಮಾನದಲ್ಲಿ ಬದುಕಿದ್ದೇವೆ ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿದೆ.
ಯಶವಂತ್ ಬುಗಡಹಳ್ಳಿ
ಮನೆಯಲ್ಲಿ ಮಕ್ಕಳಿದ್ದು ಶಾಲೆಗೆ ಕಳಿಸಲು ವಾಹನದ ವ್ಯವಸ್ಥೆ ಇದ್ದು ಅದು ಬರಲು ರಸ್ತೆ ಇಲ್ಲದಂತಾಗಿ ಮಕ್ಕಳನ್ನು ಒಂದು ಕಿಲೋಮೀಟರ್ ನಡೆದುಕೊಂಡು ಹೋಗಿ ನಂತರ ಕಾರನ್ನು ತೆಗೆದುಕೊಂಡು ಹೋಗಿ ಶಾಲೆಗೆ ಕಳಿಸುವಂತ ಪರಿಸ್ಥಿತಿ ಆಗಿದೆ ಮನೆಗೆ ಬರುವಂತಾಗಿದೆ ನಡೆದುಕೊಂಡು ಹೋಗಲು ಸಾಧ್ಯವಾಗದಷ್ಟು ರಸ್ತೆ ಹಾಳಾಗಿದೆ ಮಕ್ಕಳನ್ನು ಶಾಲೆಗೆ ಕಳಿಸುವುದು ಬೇಡ ಏನು ಅಷ್ಟು ಮಟ್ಟಿಗೆ ಬೇಸರ ತಂದಿದೆ ರಸ್ತೆ.
ಕಾರ್ತಿಕ್ ಬುಗಡಹಳ್ಳಿ
ನಮ್ಮದು ಚಿಕ್ಕ ಕುಟುಂಬ ವಾಗಿದ್ದು ಬೆಂಗಳೂರಿಂದ ಬಂದು ಊರಿನಲ್ಲೇ ವ್ಯವಸಾಯ ಹಾಗೂ ಬಾಡಿಗೆ ನಂಬಿ ಬದುಕುತ್ತಿದ್ದೇನೆ, ಪಿಕಪ್ ವಾಹನವಿದ್ದು ಊರಿಂದ ಹೊರಗೆ ಹೋಗಲು ಒಳಗೆ ಬರಲು ಸಾಧ್ಯವಾಗದಷ್ಟು ರಸ್ತೆ ಹಾಳಾಗಿದ್ದು ಮನೆಯಲ್ಲಿ ಕೋರುವಂಥ ಪರಿಸ್ಥಿತಿಯಾಗಿದ್ದು ಮತ್ತೆ ಊರು ಬಿಟ್ಟು ನಗರದತ್ತ ಹೋಗುವ ಯೋಚನೆ ಬಂದಿದ್ದೆ, ಮುಖ್ಯ ರಸ್ತೆ ಇಲ್ಲದ ಊರಲ್ಲಿ ಜೀವನ ಮಾಡಲು ಸಾಧ್ಯವಾದಷ್ಟು ಬೇಸರ ತಂದಿದೆ
ವಿಶ್ವನಾಥ್ ಬುಗುಡಹಳ್ಳಿ
ನಿಯತ್ತಾಗಿ ದುಡಿದು ತಿನ್ನುವ ರೈತಾಪಿವರ್ಗಕ್ಕೆ ಹಾಗೂ ಕೂಲಿ ಕಾರ್ಮಿಕರಿಗೇ ಇಂತಹ ಸಮಸ್ಯೆ ಗಳು ಕಟ್ಟಿಟ್ಟ ಬುತ್ತಿ , ಚುಣಾವಣೆ ಸಮಯದಲ್ಲಿ ಹುಡುಕಿ ಬರುವ ಜನ ನಾಯಕರೂ ಈಗ ಎಲ್ಲಿ ಹತ್ತಾರು ವರುಷಗಳಿಂದ ಸಮಸ್ಯೆ ಇದ್ದರೂ ಎಷ್ಟೇಲ್ಲ ಮನವಿ ಮಾಡಿದರು ಯಾವೊಬ್ಬ ಅಧಿಕಾರಿಯೂ ಜನ ಪ್ರತಿನಿಧಿಯು ಸಹ ಇತ್ತ ತಿರುಗಿ ನೋಡಿಲ್ಲ..