ಅಧಿಕಾರದಲ್ಲಿ ಸಮಾನತೆಯ ಅವಕಾಶ ಒಂದೇ ಹುದ್ದೆ ಒಂದೇ ಸಿದ್ದಾಂತದ ಪ್ರಭುದ್ಧ ರಾಜಕಾರಣಿ ಯಡೇಹಳ್ಳಿ ಆರ್ ಮಂಜುನಾಥ್ ಅವರೊಂದಿಗೆ ಸಂದರ್ಶನ.
ಸಕಲೇಶಪುರ ತಾಲೂಕಿನಲ್ಲಿ ಟಿಎಪಿಎಂಎಸ್ ಚುನಾವಣೆ, ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ತಾಲೂಕು ಚುನಾವಣೆಗಳು ನಡೆಯುವ ದಿನಾಂಕ ಘೋಷಣೆಯಾಗಿ ನೂರಾರು ಆಕಾಂಕ್ಷಿಗಳು ಸ್ಪರ್ಧೆ ಮಾಡಿ ಕಣದಲ್ಲಿದ್ದಾರೆ. ಅನೇಕ ವ್ಯಕ್ತಿಗಳು ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಇನ್ನಿತರ ಹುದ್ದೆಗಳನ್ನು ಅನುಭವಿಸುತ್ತಿದ್ದು ಮೂರ್ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ಹುದ್ದೆ ಅನುಭವಿಸಿದ್ದವರು ಕೂಡ ಮತ್ತೊಮ್ಮೆ ಅವಕಾಶಕ್ಕಾಗಿ ಸ್ಪರ್ಧೆಯಲ್ಲಿರುವುದು ವಿಪರ್ಯಾಸ ಆದರೆ ಈ ಎಲ್ಲಾ ಚುನಾವಣೆಗಳಲ್ಲಿ ಯಡೇಹಳ್ಳಿ ಆರ್ ಮಂಜುನಾಥ್ ಸ್ಪರ್ಧಿಸಬೇಕೆಂಬ ಆಕಾಂಕ್ಷೆ ಹಲವರದ್ದಾಗಿತ್ತು ಅವರನ್ನು ಭೇಟಿ ಮಾಡಿ ಹಲವರು ಸಂಪರ್ಕಿಸಿದರು ಕೂಡ ಮಂಜುನಾಥ್ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದೆ ಕುತೂಹಲ ಮೂಡಿಸಿದ್ದಾರೆ ಅವರನ್ನು ದೂರವಾಣಿ ಮೂಲಕ ಸಂದರ್ಶಿಸಿದ ಸಂಗತಿಗಳು ನಿಮ್ಮ ಮುಂದೆ.
*ಪ್ರಶ್ನೆ :* ಎಲ್ಲಾ ಚುನಾವಣೆ ಎಲ್ಲಾ ಕಾರ್ಯಕ್ರಮಗಳಲ್ಲೂ ತಾವು ಮುಂಚೂಣಿಯಲ್ಲಿರುವವರು ಈ ಬಾರಿಯ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದಿರುವುದಕ್ಕೆ ಕಾರಣವೇನು ?
*ಉತ್ತರ :* ನಾನು ಕೆಲವಾರು ಸಿದ್ಧಾಂತಗಳನ್ನು ಇಟ್ಟುಕೊಂಡು ಸಾರ್ವಜನಿಕ ಜೀವನಕ್ಕೆ ಬಂದಿದ್ದೇನೆ ಒಂದು ಹುದ್ದೆ ಒಂದು ಸಿದ್ಧಾಂತದಡಿಯಲ್ಲಿ ಕೆಲಸ ಮಾಡುವ ಉದ್ದೇಶ ನನ್ನದು ನಾನು ಈಗ ಹಾಲಿ ಕೆಪಿಸಿಸಿ ಸದಸ್ಯನಾಗಿದ್ದು ಒಂದು ಹುದ್ದೆಯಲ್ಲಿ ಇರಬಯಸುತ್ತೇನೆ ಪ್ರಜಾಪ್ರಭುತ್ವದ ಆಷಯದಂತೆ ಸರ್ವರಿಗೂ ಅಧಿಕಾರ ಹಂಚಿಕೆ ಆಗಬೇಕು ಎಂಬುದು ನನ್ನ ಉದ್ದೇಶ ಹೊಸ ಹೊಸ ಪ್ರತಿಭೆಗಳು ಸಾರ್ವಜನಿಕ ಜೀವನಕ್ಕೆ ಆಗಮಿಸಬೇಕು ಎಂಬ ಉದ್ದೇಶ ಬರೀ ನಮ್ಮದು ಮಾತುಗಳು ಆಗಬಾರದು ನಡೆಯಲ್ಲಿ ತೋರಿಸಬೇಕು.
*ಪ್ರಶ್ನೆ:* ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ 2020 ರ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಹಿಂದೆ ಪಡೆದಿರಿ ಈ ಬಾರಿ ಸ್ಪರ್ಧಿಸಬಹುದಿತ್ತು ಯಾಕೆ ಸ್ಪರ್ಧಿಸುತ್ತಿಲ್ಲ ? ತಾಲೂಕು ಅಧ್ಯಕ್ಷ ಸ್ಥಾನಕ್ಕಾದರು ಸ್ಪರ್ಧಿಸಬಹುದಿತ್ತು ಯಾಕೆ ಸ್ಪರ್ಧೆ ಮಾಡಲಿಲ್ಲ?
*ಉತ್ತರ:* ಹೋದ ವರ್ಷ ಹಲವಾರು ಜನರನ್ನು ಸದಸ್ಯರನ್ನಾಗಿ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೆ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದೆ. ಸಮಾಜದ ಹಿರಿಯರು ಮಾರ್ಗದರ್ಶಕರು ಹಾಗೂ ಮಠಾಧೀಶರುಗಳ ಆಶಯದಂತೆ ನಾನು ನನ್ನ ನಾಮಪತ್ರ ಹಿಂಪಡೆದು ಆಡಳಿತ ಮಂಡಳಿ ಸಮಿತಿ ಸದಸ್ಯನಾಗಿ ಕೆಲಸ ನಿರ್ವಹಿಸಿದ್ದೆ. ಹಾಗಾಗಿ ಬೇರೆಯವರಿಗೂ ಅವಕಾಶವಾಗಲಿ ಎಂಬ ಉದ್ದೇಶದಿಂದ ಸ್ಪರ್ಧೆ ಮಾಡಿಲ್ಲ,, ತಾಲೂಕು ಅಧ್ಯಕ್ಷ ಸ್ಥಾನಕ್ಕೂ ಕೂಡ ಸ್ಪರ್ಧೆ ಮಾಡಿ ಎಂದು ಹಲವರು ಒತ್ತಾಯಿಸಿದರು ಆದರೂ ಕೂಡ ಅಲ್ಲಿ ಹೊಸ ಸಮಾಜದ ಯುವಕರು ಮುಂಚೂಣಿಗೆ ಬರಬೇಕೆಂಬು ಉದ್ದೇಶದಿಂದ ಸ್ಪರ್ಧಿಸಿಲ್ಲ, ಪ್ರಭಾವಿಗಳು ಎದುರು ಸ್ಪರ್ಧೆ ಒಟ್ಟಲು ನನಗೆ ಆಸಕ್ತಿ ಇಲ್ಲ.
*ಪ್ರಶ್ನೆ:* ಇನ್ನೇನು ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಗಳು ಹತ್ತಿರವಾಗಿದೆ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷರಾಗಿ ಹೆಸರು ಮಾಡಿದ್ದೀರ ಮತ್ತೆ ತಾಲೂಕು ಪಂಚಾಯಿತಿಗೆ ಸ್ಪರ್ಧೆ ಮಾಡುತ್ತೀರಾ. ?
*ಉತ್ತರ:* ಬೆಳಗೋಡು ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಬೆಳಗೋಡಿನ ಸಮಸ್ತ ನಾಗರಿಕ ಬಂಧುಗಳು ನನ್ನನ್ನು ಆಯ್ಕೆ ಮಾಡಿ ನನ್ನನ್ನು ತಾಲೂಕಿನಾದ್ಯಂತ ಗುರುತು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐದು ವರ್ಷ ಅಧಿಕಾರ ಅನುಭವಿಸಿದ್ದೇನೆ ಯಾವುದೇ ಕಾರಣಕ್ಕೂ ಮತ್ತೆ ತಾಲೂಕು ಪಂಚಾಯಿತಿ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಕಾರ್ಯಕರ್ತರಿಗೆ ಅವಕಾಶ ಆಗಲಿ ಎಂದು ಉದ್ದೇಶ.
*ಪ್ರಶ್ನೆ :* ಬೆಳಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ಜನರಲ್ ಕ್ಯಾಟಗರಿ ಮೀಸಲಾದರೆ ಸ್ಪರ್ಧೆ ಮಾಡುತ್ತೀರಾ..
*ಉತ್ತರ :* ಬೆಳಗೋಡು ಜಿಲ್ಲಾ ಪಂಚಾಯತಿ ಕ್ಷೇತ್ರದ ಸಾರ್ವಜನಿಕ ಬಂಧುಗಳು ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ಕಾಂಗ್ರೆಸ್ ಪಕ್ಷದ ಸರ್ವರು ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟರೆ ಖಂಡಿತ ಸ್ಪರ್ಧೆಗೆ ಚಿಂತನೆಯಲ್ಲಿದ್ದೇನೆ
*ಪ್ರಶ್ನೆ:* ಒಬ್ಬ ವ್ಯಕ್ತಿ ಒಂದೇ ಹುದ್ದೆ ಅಲಂಕರಿಸಬೇಕು ಎಂಬ ನಿಮ್ಮ ವಾದಕೆ ಸಮಂಜಸ ಉತ್ತರ ನೀಡಿ ?
*ಉತ್ತರ:* ಯಾವುದೇ ವ್ಯಕ್ತಿ ಒಂದು ಹುದ್ದೆಯಲ್ಲಿ ಚುನಾಯಿತರಾಗಿದ್ದು ಮುಂದಿನ ಹುದ್ದೆಗೆ ಸ್ಪರ್ಧೆ ಮಾಡುವ ಮೊದಲು ಹಾಲಿ ಇರುವ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನಂತರ ಸ್ಪರ್ಧಿಸುವ ಅವಕಾಶದ ತಿದ್ದುಪಡಿ ಆಗಬೇಕು.
ಬಾಬಾ ಸಾಹೇಬರು ಕೊಟ್ಟಂತಹ ಸಂವಿಧಾನದ ಅಡಿಯಲ್ಲಿ ಸರ್ವರಿಗೂ ಸಮಪಾಲು ಸಮಬಾಳು ಎಂಬ ಉದ್ದೇಶವಿದೆ.
ಅತಿ ಹೆಚ್ಚು ಜನಸಂಖ್ಯೆ ಇರುವ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಎಲ್ಲರಿಗೂ ಅವಕಾಶ ಸಿಗಬೇಕು ಹೊಸ ಹೊಸ ಚಿಂತನೆಗಳಿಗೆ ಬೆಲೆ ಬರಬೇಕಾದರೆ ಅನುಭವಿಸಿದವರು ಮುಂದಿನ ಹೆಜ್ಜೆಗಳ ಗುರುತನ್ನು ಮಾಡಿಕೊಂಡು ಮುಂದೆ ಹೋಗಬೇಕು ಆಗ ಹಿಂಬಾಲಿಸುವ ನಮ್ಮ ಅನುಯಾಯಿಗಳು ನಮ್ಮನ್ನು ಮೆಚ್ಚಿಕೊಂಡಿರುವ ಜನರಿಗೆ ಅಧಿಕಾರ ಸಿಗಬಹುದು ಮಾತ್ರ ಸಂವಿಧಾನದ ಆಶಯ ಪ್ರಜಾಪ್ರಭುತ್ವದ ಧ್ಯೇಯ ಉಳಿಯಲು ಸಾಧ್ಯ ಇಲ್ಲವಾದರೆ ಎಲ್ಲವೂ ಬರಿ ಮಾತಿನಂತೆ ಸೀಮಿತವಾಗುತ್ತದೆ.