
ವರ್ತಕರ ಸಂಘದ ವಾರ್ಷಿಕ ಮಹಾಸಭೆ
ಸಕಲೇಶಪುರ ಪಟ್ಟಣದ ಗುರುವೇ ಗೌಡ ಕಲ್ಯಾಣ ಮಂಟಪದಲ್ಲಿ 2024-25 ನೆ ಸಾಲಿನ ವಾರ್ಷಿಕ ಮಹಾ ಸಭೆಯ ಅಂಗವಾಗಿ ತಾಲೂಕು ವರ್ತಕರ ಸಂಘ ಹಾಗೂ ಜೀವ ರಕ್ಷಾ ನಿಧಿ ಹಾಸನ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 42 ದಾನಿಗಳು ರಕ್ತ ದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ರಕ್ತದಾನ ಮಾಡಿದ ದಾನಿಗಳಿಗೆ ಪ್ರಸಂಸನ ಪತ್ರ ನೀಡ ಲಾಯಿತು. ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಹೆಚ್ ಹೆಚ್ ಉದಯ ರವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ವಾರ್ಷಿಕ ಮಹಾಸಭೆ ಹಮ್ಮಿ ಕೊಂಡಿದ್ದ ವಾರ್ಷಿಕ ಮಹಾಸಭೆಯ ಅಂಗವಾಗಿ ಸುಮಾರು 42 ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿ ಗೊಂಡಿದೆ
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಸಂಘದ ಎಲ್ಲಾ ಸದಸ್ಯರುಗಳಿಗೆ ಧನ್ಯವಾದ ತಿಳಿಸಿದರು ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸೈಯದ್ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಮಧುಕುಮಾರ್ ಬಿ ಎಂ, ಖಜಾಂಚಿ ಮಂಜುನಾಥ್ ಹೆಚ್ಆರ್, ಸತ್ಯನಾರಾಯಣ ಎಸ್ ಪಿ, ರಾಜಕುಮಾರ್, ಪ್ರಶಾಂತ್ ಎಂ ಆರ್, ಲೋಹಿತ್ ಬಿ ಜೆ, ಕಾರ್ತಿಕ್, ರವಿಶಂಕರ್, ಎಲ್ಲಾ ನಿರ್ದೇಶಕರುಗಳು ಇತರು ಹಾಜರಿದ್ದರು.