
ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಕಾಮಗಾರಿ ಬಾರ್ಡರ್ಸ್ ಕಲ್ಲು ತಂತಿ ಅಳವಡಿಕೆ ಅವೈಜ್ಞಾನಿಕ.
ಹಲವು ಕಡೆ ಬಿರುಕು ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಚರಂಡಿ ಯಂತೆ ಹರಿಯುತಿರುವ ನೀರು ವಾಹನ ಸವಾರರ ಪರದಾಟ ಸಕಲೇಶಪುರ ತಾಲೂಕಿನ ಮಾರನಹಳ್ಳಿ, ಹೆಗ್ಗದೆ, ದೊಡ್ಡ ತಪ್ಪಲು, ಆನೆಮಹಲ್, ಗ್ರಾಮ ವ್ಯಾಪ್ತಿಯ ಕೆಲವು ಕಡೆ ಅಧಿಕ ಮಳೆಯಿಂದಾಗಿ ಕೆಲವು ಕಡೆ ಭೂಕುಸಿತ ಉಂಟಾಗಿ ರಸ್ತೆಗೆ ಮಣ್ಣು ಬಿದ್ದ ಪರಿಣಾಮ ವಾಹನ ಸವಾರರು ಅರ ಸಹಾಸ ಮಾಡಿ ವಾಹನ ಚಲಾಯಿಸುವಂತಾಗಿದೆ,
ಇನ್ನು ಕೆಲವು ಕಡೆ ಈ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದಾಗಿ ತಡೆಗೋಡೆ ಕುಸಿದಿರುತ್ತದೆ, ಹೆದ್ದಾರಿಯ ಮಧ್ಯ ಭಾಗದಲ್ಲಿ ಚರಂಡಿಯಂತೆ ನೀರು ಹರಿದು ಹೋಗುತ್ತಿರುವುದರಿಂದ ರಸ್ತೆಯ ಬದಿ ಕೆಲವು ಕಡೆ ಕುಸಿದಿರುತ್ತದೆ.ಬೆಂಗಳೂರು ಮಂಗಳೂರು,ಹಾಸನ, ಧರ್ಮಸ್ಥಳ, ಹಾಗೂ ಇತರೆ ಪ್ರದೇಶಗಳಿಗೆ ಈ ಮಾರ್ಗದಲ್ಲಿ ಪ್ರತಿನಿತ್ಯ ಕಾರು, ಬಸ್ಸು,ಹಾಗೂ ಸರಕು ವಾಹನಗಳು, ಪ್ರವಾಸಿಗಳು ಸೇರಿ ದಂತೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ,
ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕವಾಗಿ 20 ರಿಂದ 30 ಅಡಿ ಎತ್ತರದ ವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸದೆ, ಬೋರ್ಡಸ್ ಮತ್ತು ತಂತಿ ಅಳವಡಿಕೆಯ ಮೂಲಕ ತಡೆಗೋಡೆ ನಿರ್ಮಿಸಿರುವ ಕಾರಣ ಕೆಲವು ಕಡೆ ತಡೆಗೋಡೆ ಬಿರುಕು ಬಿಟ್ಟಿದ್ದು, ಬಿರುಕು ಬಿಟ್ಟಿರುವ ರಸ್ತೆಗೆ ಕಾಂಕ್ರೀಟ್ ಸುರಿದು ಬಿರುಕು ಮುಚ್ಚುವಂತಾಗಿದೆ,
ಎಂದು ಸಾರ್ವಜನಿಕರು, ಹಾಗೂ ಸ್ಥಳೀಯರು, ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ,