ದಿನಾಂಕ 12.07.24 ರಂದು ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಶಾಸಕರ ಅದ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಆದೇಶ ಉಲ್ಲಂಘನೆ ಮಾಡಿದ ಮಳಲಿ PDO ರಂಗಸ್ವಾಮಿ ಅಮಾನತ್ತಿಗೆ ಆಗ್ರಹ..
ದಿನಾಂಕ 12/07/2024 ರಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಳಲಿ ಗ್ರಾಮ ಸ. ನಂ. 278’ರಲ್ಲಿ ಅಕ್ರಮವಾಗಿ ವಿಪತ್ತು ನಿರ್ವಹಣೆ ರಸ್ತೆ ಮುಚ್ಚಿ ಮಣ್ಣು ಹಾಕಿರುವವರ ವಿರುದ್ದ ಹಾಗೂ ಅಕ್ರಮವಾಗಿ ಕಟ್ಟಿರುವ ಮಳಿಗೆಗಳಿಗೆ ಅನುಮತಿ ಪಡೆದಿಲ್ಲ ಎಂದು ಅಂಗಡಿ ತೆರವುಗೊಳಿಸಲು ಆದೇಶ ಮಾಡಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ..
ಎರಡು ದಿನದಲ್ಲಿ ತೆರವುಗೊಳಿಸುತ್ತೇನೆ ಎಂದು ಜನಸ್ಪಂದನ ಕಾರ್ಯಕ್ರಮದಲ್ಲಿ ಒಪ್ಪೊಕೊಂಡಿದ್ದ ಮಳಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಹಿರಿಯ ಅಧಿಕಾರಿಗಳ ಆದೇಶ ಧಿಕ್ಕರಿಸಿ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವುದನ್ನು ವಿರೋಧಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಅಮಾನತ್ತು ಮಾಡಲು ಆಗ್ರಹಿಸಿ ಮಾನ್ಯ ಉಪವಿಭಾಗಾಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು..
•ಹೇಮಾವತಿ ಸೇತುವೆ ದುರಸ್ಥಿ ಆದಲ್ಲಿ ಹೋಗಲು ಇರುವ ವಿಪತ್ತು ನಿರ್ವಹಣಾ ರಸ್ತೆಯನ್ನು ಮುಚ್ಚಿರುತ್ತಾರೆ ನೆರೆ ಬಂದಾಗ ದೋಣಿ ಬಳಸಲು ಇರುವ ರಸ್ತೆ ಮುಚ್ಚಿದ್ದಾರೆ.
•ಸಂಪೂರ್ಣ ಜಾಗ ಅನ್ಯಸಂಕ್ರಮಣ [Alination] ಮಾಡಿಸಿರುವುದಿಲ್ಲ.
•ಮಳಿಗೆ ಕಟ್ಟಡ ಕಟ್ಟಲು ಯಾವದೇ ಅನುಮತಿ ಪಡೆದಿಲ್ಲ.
•ವರ್ಧಮಾನ್ ಪ್ಲೇವುಡ್ಸ್ , ನೀಲಕಂಠ ಟೈಲ್ಸ್, ಭಾರತ್ ಹಾರ್ಡವೆರ್ ಅಂಗಡಿ ಮಳಿಗೆಗಳು ಯಾವದೇ ಪರವಾನಿಗೆ ಪಡಿಯದೇ ಅಕ್ರಮವಾಗಿ ನಡಿಯುತ್ತಿರುವ ಬಗ್ಗೆ ದೂರು ನೀಡಿದರು ಸಹ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಶಿವು ಜಿಪ್ಪಿ ನೀಡಿದ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅಕ್ರಮವಾಗಿ ಕಟ್ಟಿರುವ ಅಂಗಡಿ ಮಳಿಗೆ ಮುಚ್ಚಿಸಲು ಆದೇಶ ಮಾಡಿದ್ದರು.
ಸೋಮವಾರ ಮುಚ್ಚಿಸುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುತಿದ್ದು ಮಳಲಿ PDO ಅವರಿಗೆ ಮತ್ತೆ ಮನವಿ ನೀಡಿದರು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಇಂದು PDO ಅಮಾನತ್ತಿಗೆ ಆಗ್ರಹಿಸಿ ಮಳೆಯನ್ನು ಲೆಕ್ಕಿಸದೆ ಪ್ರತಿಭಟನಾಕಾರರು ತಾಲ್ಲೂಕು ಪಂಚಾಯತಿ ಕಾರ್ಯಲಯದ ಮುಂದೆ ಧರಣಿ ಮಾಡಿ ಮನವಿ ಸಲ್ಲಿಸಿದರು.