ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹೊತ್ತಿನಲ್ಲೇ ಕರೆಂಟ್ ಲೈನ್ ಕಟ್ ಆಗೋದು ಸೇರಿದಂತೆ ವಿವಿಧ ಸಮಸ್ಯೆಗಳಾಗುತ್ತಿವೆ. ಈ ಸಂದರ್ಭದಲ್ಲಿ ಲೈನ್ ಮನ್ ಗಳು ತಪ್ಪದೇ ಈ ಕೆಳಕಂಡ ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ಈ ಸಂಬಂಧ ಮಾಹಿತಿ ಹಂಚಿಕೊಂಡಿರುವಂತ ವಾರ್ತಾ ಇಲಾಖೆಯು, ವಿದ್ಯುತ್ ಕೆಲಸದ ವೇಳೆ ಲೈನ್ ಮನ್ ಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಮುಂದಾಗಲಿರುವಂತ ಸಮಸ್ಯೆ, ಜೀವ ಹಾನಿಯನ್ನು ತಪ್ಪಿಸುವಂತೆ ತಿಳಿಸಿದೆ.
ಈ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ
ತಪ್ಪದೇ ಉತ್ತಮ ಗುಣಮಟ್ಟದ ಬೂಟ್ ಹಾಗೂ ಗ್ಲೌಸ್ ಗಳನ್ನು ಧರಿಸುವುದು
ತೆರೆದ ವಿದ್ಯುತ್ ತಂತಿಗಳಿಂದ ದೂರವಿರುವುದು
ಕೆಲಸದ ವೇಳೆ ಯಾವುದೇ ರೀತಿಯ ಲೋಹದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ
ಪರಿಣಿತರಿಂದ ಮಾತ್ರವೇ ವಿದ್ಯುತ್ ಕೆಲಸವನ್ನು ಮಾಡಿಸುವುದು
ಗುಡುಗು, ಸಿಡಿಲಿನ ವೇಳೆ ವಿದ್ಯುತ್ ಕೆಲಸವನ್ನು ಮಾಡಡಿರುವುದು
ಅಪಘಾತ ಸಂಭವಿಸಿದ್ದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ತಿಳಿದಿರಬೇಕು.