ಸಕಲೇಶಪುರ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಬರುತ್ತಿರುವ ಕಾರಣದಿಂದ ಗುಡ್ಡ ಕುಸಿತ ಉಂಟಾಗಿ ರಸ್ತೆಗಳು ಕುಸಿದಿರುವ ಕಾರಣ
ಸಂಚಾರ ಅಸ್ತವ್ಯಸ್ಥ ಗೊಂಡಿರುವುದನ್ನು ಮಾನ್ಯ ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನ್ಯ ಶ್ರೀ ಕೆ ಎನ್ ರಾಜಣ್ಣ ಶಾಸಕರು, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಆದಂತಹ ಕೆಎಂ ಶಿವಲಿಂಗೇಗೌಡರವರು. ಹಾಸನ ಲೋಕಸಭಾ ಸಂಸದರು. ಶ್ರೇಯಸ್ ಎಂ ಪಟೇಲ್ ಹಾಗೂ ಮಾಜಿ ಎಂಎಲ್ಸಿ ಎಂಎ ಗೋಪಾಲಸ್ವಾಮಿ ಅವರು ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮುರಳಿ ಮೋಹನ್ ಹಾಗೂ ಸಿ ಸತ್ಯಭಾಮ. ಜಿಲ್ಲಾಧಿಕಾರಿಗಳು ಪೂರ್ಣಿಮಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು. ಮಹಮ್ಮದ್ ಸುಜಿತ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಹಾಗೂ ತಾಲ್ಲೂಕಿನ ಉಪ ವಿಭಾಗ ಅಧಿಕಾರಿಗಳಾದಂತ ಡಾ. ಶೃತಿ. ತಾಸಿಲ್ದಾರ್ ಮೇಘನ ತಾಲೂಕಿನ ಎಲ್ಲಾ ಅಧಿಕಾರಿಗಳು. ಹಾನಿಗೊಳಗಾದಂತಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರದಿಕಾರದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ ಮಳೆ ನಿಲ್ಲುವವರೆಗೂ ಕಾಮಗಾರಿಯನ್ನು ನಿಲ್ಲಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆಯನ್ನು ಮಾಡಿಕೊಟ್ಟು ಮಳೆ ನಿಂತ ಮೇಲೆ ಉತ್ತಮ ಕಾಮಗಾರಿಯನ್ನ ನಡೆಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.