ಏಳನೇ ತರಗತಿ ಸೀನ ಸೆಟ್ಟರು ನಮ್ಮ ಟೀಚರು ಎಂಬ ಪಾಠದಲ್ಲಿ ಬರುವ ಗದ್ದೆ ನಾಟಿಯ ಪ್ರಾಯೋಗಿಕ
ಅನುಭವ ನೀಡಲು ರಮೇಶ್ ರವರ ಗದ್ದೆಗೆ ಇಂದು ನಮ್ಮ ಕಬ್ಬಿನ ಗದ್ದೆ ಶಾಲೆಯ ಮಕ್ಕಳನ್ನು ಗದ್ದೆಗೆ ಕರೆದುಕೊಂಡು ಹೋಗಿ ಸಸಿಗಳನ್ನು ಗದ್ದೆ ನಾಟಿ ಮಾಡುವ ಪ್ರಾಯೋಗಿಕ ಅನುಭವವನ್ನು ನೀಡುವುದರೊಂದಿಗೆ ಮಕ್ಕಳಿಗೆ ಗದ್ದೆ ಓಟ ಹಾಗೂ ಕಬಡ್ಡಿ ಇನ್ನಿತರ ಕ್ರೀಡೆಗಳನ್ನು ಆಡಿಸುವುದ ರೊಂದಿಗೆ ಶಿಕ್ಷ ಸಪ್ತಾಹ ಕ್ರೀಡಾ ದಿನವನ್ನು ಆಚರಿಸಲಾಯಿತು.
ಈ ಚಟುವಟಿಕೆಗೆ ಸಹಕರಿಸಿದ ಎಲ್ಲಾ ಪೋಷಕರುಗಳಿಗೆ ಹಾಗೂ ಶ್ರೀಯುತ ರಮೇಶ್ ರವರಿಗೆ ನಮ್ಮ ಶಾಲೆಯ ಶಿಕ್ಷಕ ವೃಂದದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಮೇಡಂ, ಮಂಜುಳಾ ಮೇಡಂ, ಖೈಸರ್ ಜಹಾನ್ ಮೇಡಂ ಹಾಗೂ ಅರುಣ್ ಸರ್ ರವರು ಪಾಲ್ಗೊಂಡು ಚಟುವಟಿಕೆಯನ್ನು ಯಶಸ್ವಿಗೊಳಿಸಲಾಯಿತು