ಸಕಲೇಶಪುರದ ಐತಿಹಾಸಿಕ ರಾಮಮಂದಿರ ಶಿಥಿಲಗೊಂಡಿದ್ದು ಯಾವ ಸಮಯದಲ್ಲೂ ಆದರೂ ಬೀಳುವ ಸಂಭವವಿದ್ದು ಸಕಲೇಶಪುರ ಮುಜರಾಯಿ ಇಲಾಖೆ ಮತ್ತು ತಾಲ್ಲೂಕು ಆಡಳಿತದ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದ ರಘು ಸಕಲೇಶಪುರ
ಗ್ರಾಮದೇವರಾದ ಸಕಲೇಶ್ವರ ಸ್ವಾಮಿ ದೇವಸ್ಥಾನದ ಆವರಣದ ಒಳಗೆ ಇರುವ ಬಹಳ ಹಳೆಯ ದೇವಸ್ಥಾನ ಹಾಗೂ ಐತಿಹಾಸಿಕ
ಶ್ರೀರಾಮ-ಸೀತಾ-ಲಕ್ಷ್ಮಣ ಮೂರ್ತಿ ಇದ್ದು. ಸಂರಕ್ಷಣೆ ಮಾಡುವುದರಲ್ಲಿ ತಹಶೀಲ್ಧಾರ್ ವಿಫಲರಾಗಿದ್ದಾರೆ ಎಂದು ರಘು ಸಕಲೇಶಪುರ ಹಿಂದೂ ಮುಖಂಡ ಆರೋಪಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ದೀನನಿತ್ಯ ಪೂಜೆ ನಡಿಯಬೇಕು ಆದರೆ ರಾಮನವಮಿಯಲ್ಲೂ ಪೂಜೆ ಮಾಡದೇ ಅವಮಾನ ಮಾಡಿರುವ ಮುಜರಾಯಿ ಇಲಾಖೆ ಆದಾಯ ಬರುವ ದೇವಸ್ಥಾನದ ಹುಂಡಿ ಹಣಕ್ಕೆ ಮುಗಿಬಿದ್ದಿರೋದು ಖಂಡನೀಯ.
ತಾಲ್ಲೂಕು ಆಡಳಿತ ಅಧಿಕಾರಿ ತಹಶೀಲ್ಧಾರ್ ದಿನನಿತ್ಯ ಅದೇ ರಸ್ತೆಯಲ್ಲಿ ಓಡಾಡಿದರು ಕಣ್ಣಿಗೆ ಕಂಡರೂ ಕುರುಡರಂತೆ ಓಡಾಡುತ್ತಿರೋದು ಅವರ ಕಾರ್ಯ ವೈಖರಿ ಏನೆಂಬುದನ್ನು ಸಾರ್ವಜನಿಕರಿಗೆ ಪ್ರಕಟಿಕರಣ ಮಾಡುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ.
ರಾಮ ಮಂದಿರ ಎಂದೇ ಇರುವ ದೇವಸ್ಥಾನವನ್ನ ಸರಿಯಾಗಿ ಪೂಜೆ ಮಾಡಿಸದೇ ಹಿಂದೂ ಭಕ್ತರಿಗೆ ಅವಮಾನ ಮಾಡುತ್ತಿದ್ದು ಮೂರೂ ಲಕ್ಷಕ್ಕೂ ಹೆಚ್ಚು ಮೌಲ್ಯದ ಮೂರ್ತಿ ಇದ್ದು ಶಿಥಿಲಗೊಂಡ ಗೋಡೆ ಬಿದ್ದು ಮೂರ್ತಿಗೆ ಹಾನಿಯಾದರೆ ತಾಲ್ಲೂಕು ಆಡಳಿತ ನೇರ ಹೊಣೆಯಾಗಿರುತ್ತದೆ. ಎಂದು ಎಚ್ಚರಿಕೆ ನೀಡಿದ್ದಾರೆ.