ಹೆಚ್.ಡಿ.ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು
ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆಯೇ ಮೂಗಿನಿಂದ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ-ಜೆಡಿಎಸ್ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಹೆಚ್.ಡಿ.ಕುಮರಸ್ವಾಮಿ ಮೂಗಿನಿಂದ ಇದ್ದಕ್ಕಿದ್ದಂತೆ ರಕ್ತ ಸುರಿಯಲಾರಂಭಿಸಿದೆ. ಟವೆಲ್ ನಿಂದ ಒರೆಸಿಕೊಂಡರೂ ಕಡಿಮೆಯಾಗಿಲ್ಲ ಮೂಗಿನಿಂದ ರಕ್ತ ಸುರಿದು ಬಟ್ಟೆ ಮೇಲೆಲ್ಲ ರಕ್ತವಾಗಿದೆ. ಅಪ್ಪನ ಮೂಗಿನಿಂದ ಸುರಿಯುತ್ತಿದ್ದರಕ್ತ ಕಂಡು ಪಕ್ಕದಲ್ಲೇ ನಿಂತಿದ್ದ ಪುತ್ರ ನಿಖಿಲ್ ಗಾಬರಿಯಾಗಿದ್ದಾರೆ. ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕುಮಾರಸ್ವಾಮಿ ತೆರಳಿದ್ದಾರೆ.
ತಕ್ಷಣ ತಂದೆಯನ್ನು ನಿಖಿಲ್ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.