ಜೆಡಿಎಸ್ ಪಕ್ಷದಿಂದ ಉಪಾಧ್ಯಕ್ಷರಾಗಿ ವನಜಾಕ್ಷಿ ಅವಿರೋಧ ಆಯ್ಕೆ.
ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷರ ಸ್ಥಾನ ತೆರವಾದ ಕಾರಣ 29/7/2024 ರಂದು ಚುನಾವಣೆ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿ ರಾಮಕೃಷ್ಣ ಅವರ ಸಮ್ಮುಖದಲ್ಲಿ ಚುನಾವಣೆ ನಡೆಸಿ ಒಪ್ಪಂದದ ಪ್ರಕಾರ ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ವನಜಾಕ್ಷಿ ಅವರನ್ನು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಹರೀಶ್ , ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ , ಅಧ್ಯಕ್ಷರಾದ ರೇಖಾ ಗೋಪಿನಾಥ್ , ಮಾಜಿ ಅಧ್ಯಕ್ಷರಾದ ರಾಮಕೃಷ್ಣ, ಸದಸ್ಯರುಗಳಾದ ಜೈ ಶಂಕರ್ , ರಾಕೇಶ್ , ಸತೀಶ್, ರಮೇಶ್, ಗಿರಿಜಮ್ಮ, ಸವಿತಾ ಜಗದೀಶ್, ವಿ ಆರ್ ಡಬ್ಲ್ಯೂ ಅರ್ಜುನ್ ಗೌಡ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಜರಿದ್ದರು.