ಊರಿಗೆ ಊರೂ ಮುಳುಗಿದರು, ಶಾಲೆಗೆ ಮಾತ್ರ ಹೋಗ್ಲೇಬೇಕು, ಹಾಸನ ಜಿಲ್ಲಾಡಳಿತದ ವಿರುದ್ಧ ಪೋಷಕರ ಆಕ್ರೋಶ
ಹಾಸನ ಜಿಲ್ಲಾಡಳಿತದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಭಾರೀ ಮಳೆ ಬರುತ್ತಿದ್ದರು, ಮಕ್ಕಳು ಶಾಲೆಗೆ ಹೋಗವ ಪರಿಸ್ಥಿತಿ ಬಂದಿದೆ.
ಮಕ್ಕಳು ಹಾಗೂ ಶಿಕ್ಷಕರು ಈ ತುಂಬಿ ಹರಿಯುತ್ತಿರೊ ನದಿ-ತೊರೆಗಳನ್ನು ದಾಟಿ ಹೋಗಬೇಕಿದೆ ಎಂದು ಹೇಳಲಾಗಿದೆ.ನಾರ್ವೆ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಿರಡಹಳ್ಳಿ ಸೇತುವೆ ತುಂಬಿ ಹರಿಯುತ್ತಿರುವುದರಿಂದ ಸೇತುವೆಯ ಮೇಲೆ ಗ್ರಾಮಸ್ಥರಗಳ ಸಹಾಯದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಕೈ ಹಿಡಿದು ದಾಟಿಸುತ್ತಿರುವುದು.
ಮುಖ್ಯ ವಾಗಿ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳ ಮತ್ತು ಆಯಾ ಗ್ರಾಮಗಳ ಸ್ತ್ಗಿತಿ ಗತಿಯನ್ನು ತಾಲೂಕಿನ ತಹಸಿಲ್ದಾರ್, ಶಿಕ್ಷಣ ಅದಿಕಾರಿಗಳು, ಗಮನಿಸಿ ವಿಧ್ಯಾರ್ಥಿಗಳ ರಜೆಯ ಬಗ್ಗೆ ತೀರ್ಮಾನಿಸಬೇಕು. ದೂರವಾಣಿ ಕರೆ ಮಾಡಿ ಕೇಳಿದರು ಸ್ಪಂದಿಸುವುದಿಲ್ಲ ಎಂದು ಗ್ರಾಮಸ್ಥರ ಆಕ್ರೋಶ.
ರಾಜ್ಯದಲ್ಲಿ ಭಾರೀ ಮಳೆ ಉಂಟಾಗಿದ್ದು, ಅನೇಕ ಕಡೆ ಗುಡ್ಡ ಕುಸಿತ ಉಂಟಾಗಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಲವು ಕಡೆ ಮಳೆಯಿಂದ ಅವಂತಾರ ಸೃಷ್ಟಿಸಿದೆ. ಈ ರಣಮಳೆಯ ನಡುವೆಯೂ ಮಕ್ಕಳು ನೀರು ತುಂಬಿರುವ ಸೇತುವೆ ದಾಟಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೀಗ ಅಲ್ಲಿ ಜನ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಹಲವೆಡೆ ಭಾರೀ ಮಳೆ ಉಂಟಾಗಿದ್ದು, ನಿನ್ನೆ ಸಂಜೆಯಿಂದ ಮಳೆ ಸುರಿದರೂ ಶಾಲೆಗಳಿಗೆ ನೀಡಿಲ್ಲ. ಸಕಲೇಶಪುರ ತಾಲ್ಲೂಕಿನ ಹಲವು ಕಡೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಕೊಚ್ಚಿ ಹೋಗಿ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಅಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಮಕ್ಕಳು ಕಡ್ಡಾಯವಾಗಿ ಶಾಲೆ ಬರುವಂತೆ ಆದೇಶಕ್ಕೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಶಾಲೆಗ ಬರಲು ಮಕ್ಕಳು ಮಾತ್ರವಲ್ಲದೆ ಶಿಕ್ಷಕರೂ ಕೂಡ ಪರದಾಟ ನಡೆಸಿದ್ದಾರೆ. ಇನ್ನು ಈ ಮಕ್ಕಳು ಹಾಗೂ ಶಿಕ್ಷಕರು ಈ ತುಂಬಿ ಹರಿಯುತ್ತಿರೊ ನದಿ-ತೊರೆಗಳನ್ನು ದಾಟಿ ಹೋಗಬೇಕಿದೆ. ಹಾಸನ, ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಾಗಿದ್ದು. ಭಾರೀ ಮಳೆ ಸುರಿದರೂ ರಜೆ ನೀಡದ ಅಧಿಕಾರಿಗಳ ವಿರುದ್ಧ ಪೋಷಕರ ಆಕ್ರೋಶಗೊಂಡಿದ್ದಾರೆ.