ರಾಜ್ಯ ಸರ್ಕಾರದ ಮಂತ್ರಿಗಳೇ ಸಕಲೇಶಪುರದ ಪ್ರಾಕೃತಿಕ ವಿಕೋಪಕ್ಕೆ ಮೊದಲು ಹಣ ಬಿಡುಗಡೆ ಮಾಡಿ ನಂತರ ಬನ್ನಿ.
ಸರ್ಕಾರದ ಮಂತ್ರಿಗಳೇ ರಾಜಕಾರಣಿಗಳೇ ಅಧಿಕಾರಿಗಳೇ, ಸಕಲೇಶಪುರದಲ್ಲಿ ಪ್ರತಿವರ್ಷ ಸಂಭವಿಸುವ ನೆರೆಹಾವಳಿ ವೀಕ್ಷಿಸಲು ಬರುವ ತಾವುಗಳು ಸುಮ್ಮನೆ ಬರಬೇಡಿ ಏನಾದರೂ ಪರಿಹಾರ ಹೊತ್ತು ತನ್ನಿ.
ಕಳೆದ ಹತ್ತು ವರ್ಷಗಳಿಂದ ಸಕಲೇಶಪುರದಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ, ರಾಷ್ಟ್ರೀಯ ಹೆದ್ದಾರಿ ಅವಘಡ, ಎತ್ತಿನಹೊಳೆ ಯೋಜನೆ ಅವಾಂತರಗಳನ್ನು ವೀಕ್ಷಿಸಲು ಸರ್ಕಾರದ ಮಂತ್ರಿಗಳು ಪ್ರಭಾವಿ ರಾಜಕಾರಣಿಗಳು ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಅದರಿಂದ ಇದುವರೆಗೆ ಏನು ಪ್ರಯೋಜನವಾಗಿಲ್ಲ ಒಂದೇ ಒಂದು ಸಮಸ್ಯೆ ಬಗೆಹರಿದಿಲ್ಲ.
ದಿನಕೊಬ್ಬರೂ ಮಂತ್ರಿಗಳು ಅಧಿಕಾರಿಗಳು ಆಗಮಿಸುವುದರಿಂದ ಜಿಲ್ಲಾಧಿಕಾರಿಗಳು, ತಾಹಸಿಲ್ದಾರ್ ರವರು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಆಡಳಿತ ಯಂತ್ರ ದಿನಪೂರ್ತಿ ಅವರ ಹಿಂದೆ ಸುತ್ತುವುದು ಬಿಟ್ಟು ಬೇರೆ ಏನು ಆಗುತ್ತಿಲ್ಲ.
ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ಮೊದಲು ಹಣ ಬಿಡುಗಡೆ ಮಾಡಿ ಅವರಿಗೆ ಕೆಲಸ ಮಾಡಲು ಸಹಕರಿಸಿ ಬರಿ ನೀವುಗಳು “ಬಂದ ಪುಟ್ಟ ಹೋದ ಪುಟ್ಟ” ಎನ್ನುವಂತೆ ಆಗಿದೆ ಏನಾದರೂ ಪರಿಹಾರ ನೀಡಿ ಅಷ್ಟೇ ಸಾಕು.
ಯಡೇಹಳ್ಳಿ ಆರ್ ಮಂಜುನಾಥ್
ಸಕಲೇಶಪುರ