ದೊಡ್ಡತಪ್ಪಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ. ಅಲ್ಲೇ ಪಕ್ಕದ ಗ್ರಾಮದಲ್ಲಿ ರಸ್ತೆಯೇ ಇಲ್ಲ. ಗ್ರಾಮಸ್ಥರಿಂದಲೇ ರಸ್ತೆ ಕಾಮಗಾರಿ ಸರಿಪಡಿಸುತ್ತಿರುವುದು..
ಸಕಲೇಶಪುರ – ಹೆಗ್ಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡತಪ್ಪಲು. ಗಾಳಿಗುಂಡಿ ಗ್ರಾಮದ ರಸ್ತೆ ಸಂಪರ್ಕ ಸಂಪೂರ್ಣ ಹಾಳಾಗಿದ್ದು ಗ್ರಾಮಸ್ಥರು ನಿತ್ಯ ಪರದಾಡುವ ದುಸ್ಥಿತಿ ಉಂಟಾಗಿದೆ.
ಕಳೆದ ಬಾರಿ ಮಳೆ ಹಿಡಿದಾಗ ಗ್ರಾಮಸ್ಥರೇ ಮನೆ ಮನೆಯಿಂದ ಹಣ ಸಂಗ್ರಹಿಸಿ ವಾಹನ ಚಲಾಯಿಸಿ ಜಾಡಿಗೆ ಮಾತ್ರ ಕಾಂಕ್ರೀಟ್ ಹಾಕಿದ್ದರು.
ಆದರೆ ಬಾರಿ ಅದು ಕೂಡ ಕಿತ್ತು ಹೋಗಿದ್ದು ಗ್ರಾಮಕ್ಕೆ ಸಂಪರ್ಕ ಇಲ್ಲದಂತಾಗಿದೆ. ಇಂದು ಗ್ರಾಮದ ಗ್ರಾಮಸ್ಥರೇ ಸೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗೆದು ಹಾಕಿರುವ ಡಾಂಬರು ರಸ್ತೆಯ ಚೂರುಗಳನ್ನು ಹಾಕಿ ತಾತ್ಕಾಲಿಕವಾಗಿ ಸಿದ್ಧಪಡಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಮಾತ್ರ ಗ್ರಾಮಕ್ಕೆ ಬರುವ ರಾಜಕಾರಣಿಗಳು ಗ್ರಾಮದಲ್ಲಿನ ಸಮಸ್ಯೆಯನ್ನು ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.