ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರು
ಗೌರವಾನ್ವಿತ ಮುಖ್ಯ ಮಂತ್ರಿಗಳು
ಕರ್ನಾಟಕ ಸರ್ಕಾರ
ವಿಷಯ: ಸಕಲೇಶಪುರ ತಾಲೂಕಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಬೇಡಿಕೆಗಳ ಮನವಿ.
ಸಕಲೇಶಪುರ ಪ್ರಕೃತಿಕ ಸೌಂದರ್ಯಕ್ಕೆ ಹೆಸರಾಗಿ ಜಗತ್ತಿನ ಆಕ್ಸಿಜನ್ ಪ್ಲಾಂಟ್ ಗಳಲ್ಲಿ ಒಂದು. ಪ್ರಕೃತಿಯ ಶ್ರೇಷ್ಠ ಶ್ರೇಷ್ಠ ಗಿಡ ಮರಗಳು, ವನ್ಯ ಜೀವ ಸಂಕುಲಗಳು ಅಗಾಧವಾದ ಸೌಂದರ್ಯ ಹೊಂದಿರುವ ಪ್ರದೇಶವಾಗಿದೆ.. ಐವತ್ತು ಸಾವಿರ ಕುಟುಂಬಗಳಿಗೆ ಬದುಕು(ಕಾಫಿ ಬೆಳೆಗಾರ ,ಕಾರ್ಮಿಕ, ವ್ಯಾಪಾರಿಯಾಗಿ) ನೀಡಿ ವಿದೇಶ ವಿನಿಮಯ ತಂದುಕೊಡುವ
ಕಾಫಿ, ಏಲಕ್ಕಿ, ಕಾಳು ಮೆಣಸು ಬೆಳೆಯುವ ಶ್ರೇಷ್ಠ ಪ್ರದೇಶ.
ಕರ್ನಾಟಕ ರಾಜ್ಯ, ದೇಶದ ಜನತೆಗೆ ಸಕಲೇಶಪುರದ ಜಲವಿದ್ಯುತ್ ಯೋಜನೆಗಳಿಂದ ವಿದ್ಯುತ್, ಎತ್ತಿನಹೊಳೆ ಯೋಜನೆಯಿಂದ ನೀರು, ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಸೌಂದರ್ಯ, ವಿದೇಶಿ ವಿನಿಮಯ ತಂದುಕೊಡುವ ಕಾಫಿ,ಕಾಳುಮೆಣಸು ಎಲ್ಲರಿಗೂ ಬೇಕು. ಹೇಮಾವತಿ ಮುಳುಗಡೆ ಸಂತ್ರಸ್ತರ ಹೆಸರಿನ ನಕಲಿ ಸರ್ಟಿಫಿಕೇಟ್ನಲ್ಲಿ ಎಲ್ಲರಿಗೂ ಭೂಮಿ ಬೇಕು, ಆದರೆ ಅಭಿವೃದ್ಧಿ ವಿಚಾರವಾಗಿ ಶೂನ್ಯ, ಅಭಿವೃದ್ಧಿಯ ನೆಪದಲ್ಲಿ ಪಶ್ಚಿಮ ಘಟ್ಟದ ಮರಣ ಹೋಮ ನಡೆದಿದೆ.
ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳ ನಿರ್ಲಕ್ಷ ಧೋರಣೆಯಿಂದ ಸಕಲೇಶಪುರದ ಅಭಿವೃದ್ಧಿ ಮರಿಚಿಕೆಯಾಗಿ.
1) ಎಂಟು ವರ್ಷ ಕಳೆದರೂ ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 75 ಕಳಪೆ ಹಾಗೂ ಭ್ರಷ್ಟಾಚಾರದಿಂದ ಕೂಡಿದೆ, ಉದ್ಘಾಟನೆಗೊಳ್ಳುವ ಮೊದಲೇ ಗುಣಮಟ್ಟ ಕಳೆದುಕೊಂಡಿದೆ, ಬ್ರಷ್ಟ ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳಬೇಕು. ಹಲವು ಕಡೆ ರಸ್ತೆ ಪುನರ್ನಿರ್ಮಾಣವಾಗಬೇಕು.
2) ಕಾಡಾನೆ ಮಾಡುವ ಸಂಘರ್ಷದಿಂದ ಕೋಟ್ಯಾಂತರವು ಬೆಳೆ ನಷ್ಟವಾಗಿ, 80 ಹೆಚ್ಚು ಜನರು ಮೃತಪಟ್ಟಿದ್ದಾರೆ, ಶಾಶ್ವತ ಪರಿಹಾರದ ಕನಸು ಕಮರಿ ಹೋಗಿದೆ. ಸಂಪೂರ್ಣ ಕಾಡಾನೆಗಳು ಸ್ಥಳಾಂತರವಾಗಬೇಕು, ದಾಳಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ಶೀಘ್ರ ದೊರೆಯುವಂತಾಗಬೇಕು. ಕಾಡಾನೆ ದಾಳಿಗೆ ಮೃತಪಟ್ಟ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು.
3) ಎತ್ತಿನಹೊಳೆ ಯೋಜನೆಯಿಂದ ಮೂಲಭೂತ ಸೌಕರ್ಯಗಳಿಗೆ ಮೀಸಲಿಡುವ ಹಣ ಹೆಚ್ಚಾಗಬೇಕಾಗಿದೆ. ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು, ದಾಖಲೆಗಳು ವ್ಯತ್ಯಾಸವಿರುವ ವಿಶೇಷ ಪ್ರಕರಣವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು.
4) ಕಳಪೆ ಮಟ್ಟದ ಅಭಿವೃದ್ಧಿ ಕಾಮಗಾರಿಗಳಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಎಲ್ಲ ವ್ಯವಸ್ಥೆಗಳು ಅಸ್ತವೆಸ್ತವಾಗುತ್ತಿದೆ. ಸಕಲೇಶಪುರ ಅಭಿವೃದ್ಧಿಗೆ ಪಶ್ಚಿಮಘಟ್ಟದ ಉಳಿವಿಗೆ ಅತಿ ಹೆಚ್ಚು ಹಣ ಮೀಸಲಿಡಬೇಕು.
5) ಪ್ರಾಕೃತಿಕ ವಿಕೋಪಕ್ಕೆ ನೀಡುವ ಹಾಸನ ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ಪ್ರತಿ ವರ್ಷ ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಹೆಚ್ಚು ಹಣ ಬಿಡುಗಡೆ ಮಾಡಬೇಕು.
6) ವ್ಯಾಪಕ ಮಳೆಯಿಂದ 60 ಪರ್ಸೆಂಟ್ ಹೆಚ್ಚು ಕಾಫಿ ಬೆಳೆ, ಕಾಳು ಮೆಣಸು, ನಾಶವಾಗಿರುವುದರಿಂದ ಕಾಫಿ ಬೆಳೆಗಾರರಿಗೆ, ರೈತರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಭತ್ತ, ಶುಂಟಿ, ಬಾಳೆ, ಅಡಿಕೆ ಇನ್ನಿತರ ಬೆಳಗಳಿಗೂ ಕೂಡ ಸೂಕ್ತ ಪರಿಹಾರ ಘೋಷಣೆ ಮಾಡಬೇಕು.
ಎಲ್ಲ ಬೇಡಿಕೆಗಳನ್ನು ನಾಡಿನ ದೊರೆಗಳಾದ ತಾವು ಪರಿಶೀಲಿಸಿ ಹೆಚ್ಚಿನ ಮಹತ್ವ ಕೊಟ್ಟು, ಎತ್ತಿನಹೊಳೆ ಯೋಜನೆಗೆ ನೀರು ಮತ್ತು ಭೂಮಿಯನ್ನು ಕಳೆದುಕೊಂಡಿದ್ದೇವೆ, ಸರ್ಕಾರದ ಅಭಿವೃದ್ಧಿ ಯೋಜನೆಗೆ ಭೂಮಿ ಪಶ್ಚಿಮ ಘಟ್ಟ ಕೂಡ ಕಳೆದುಕೊಂಡಿದ್ದೇವೆ ಹಾಗಾಗಿ, ವಾರ್ಷಿಕ ಬಜೆಟ್ ನಲ್ಲಿ ಸಕಲೇಶಪುರಕ್ಕೆ ವಿಶೇಷ ಅನುದಾನವನ್ನು ಮೀಸಲಿಟ್ಟು, ಸಹಕರಿಸಬೇಕಾಗಿ ಕೈಮುಗಿದು ಮನವಿ.
ತಮ್ಮ ವಿಶ್ವಾಸಿ
ಯಡೇಹಳ್ಳಿ ಆರ್ ಮಂಜುನಾಥ್