
🙏ಸ್ನೆಹಳ ಜೀವ ಉಳಿಸಲು ದಾನಿಗಳ ನೆರವಿನ ನಿರೀಕ್ಷೆ🙏. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸತ್ತಿಗಲ್ ಗ್ರಾಮದ ಸ್ನೇಹ(12) D/O ಮಹೇಂದ್ರ ರವರಿಗೆ ದಿನಾಂಕ 03.08=2024 ರ ಶನಿವಾರ ದಂದು ಕೊಡ್ಲಿಪೇಟೆ ಬಳಿ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು ತಲೆಯ ಮೆದುಳಿನ ಚಿಪ್ಪು ಪುಡಿಯಾಗಿದೆ. ಮತ್ತು ಕೈ, ಕಾಲು ಎರಡು ಮುರಿದು ಹೋಗಿರುತ್ತದೆ. ಇವರ ತಂದೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಇವರಿಗೂ ಇದೇ ರಸ್ತೆ ಅಪಘಾತದಲ್ಲಿ ಪೆಟ್ಟಾಗಿದ್ದು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ನೇಹ(12) ಸೇಂಟ್ ಜೋಸೆಫ್ ಶಾಲೆ ಸಕಲೇಶಪುರದಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ,ಇವರನ್ನು ಹಾಸನದ ಮಂಜುನಾಥ ಆಸ್ಪತ್ರೆಗೆ ಚಿಕತ್ಸೆಗಾಗಿ ದಾಖಲಿಸಿದ್ದು, ಇವರ ಜೀವ ಉಳಿಸಲು ಶಸ್ತ್ರ ಚಿಕಿತ್ಸೆಗೆ ಸುಮಾರು 8 ಲಕ್ಷದ ಹಣ ಅವಶ್ಯಕತೆ ಇದ್ದು ಸಹೃದಯಿ ದಾನಿಗಳು ತಮ್ಮ ಕೈಲಾದ ಸಹಾಯ ಮಾಡಿ ಸ್ನೆಹಳ ಜೀವ ಉಳಿಸಲು ಸಹಕಾರಿ ಯಾಗಬೇಕು ಎಂದು ತಮ್ಮಲ್ಲಿ ಕೈ 🙏ಮುಗಿದು ಕೇಳಿಕೊಳ್ಳುತ್ತೇವೆ.
ಪೋನ್ ಪೇ ಮತ್ತು ಗೂಗಲ್ ಪೇ ನಂಬರ್, ಶರತ್ ಎಸ್. ಎಮ್. 9164328421.