
ಸಕಲೇಶಪುರ :- ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಹುಲ್ಲಹಳ್ಳಿ ಗ್ರಾಮದ ಬಡ ಲಾರಿ ಚಾಲಕ ವಿನಯ್ (43) ಕಳೆದ ತಿಂಗಳು 8ನೇ ತಾರೀಕು ಬೆಳಗಿನ ಜಾವ 6.45 ರ ಸಮಯದಲ್ಲಿ ನೆಲ್ಯಾಡಿ ಸಮೀಪದ ಕೋಲ್ಪೆ ಎಂಬಲ್ಲಿ ಮಂಗಳೂರು ಮೂಲದವರ ಕಾರು ಹಿಂದೆಯಿಂದ ಡಿಕ್ಕಿ ಹೊಡೆದ ಪರಿಣಾಮ ತಮ್ಮ ಎರಡು ಕಾಲು ಮತ್ತು ಬಲಗೈ ಮುರಿದು ಸಂಪೂರ್ಣ ಹಾಸಿಗೆ ಹಿಡಿಯುವಂತಾಗಿತ್ತು .
ಇವರದು ಬಡ ಕೂಲಿ ಕಾರ್ಮಿಕ ಕುಟುಂಬವಾಗಿದ್ದು.
ಇವರ ಧರ್ಮಪತ್ನಿ ಗೀತಾ ಅವರು ದಿನಕೂಲಿ ಕೆಲಸ ಮಾಡಿ ಬಂದಂತಹ ಹಣದಲ್ಲಿ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು. ಇವರಿಗೆ ಎರಡು ಜನ ಮಕ್ಕಳಿದ್ದು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ.
ದುಡಿಯುವ ಎರಡು ಕೈಗಳು ಈಗ ಮೂಲೆ ಸೇರಿದಂತಾಗಿದೆ. ಅವರ ಗಂಡನ ಆಪರೇಷನ್ ಗೆ ಈಗಾಗಲೇ 4 ಲಕ್ಷ ಖರ್ಚಾಗಿದ್ದು, ಸಾಲ ಸೂಲ ಮಾಡಿ ತಮ್ಮ ಗಂಡನ ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಈಗ ಪ್ರಾಣಾಪಾಯದಿಂದ ಪಾರಾಗಿ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುವಂತಾಗಿದೆ.
ಹಾಸಿಗೆ ಮೇಲೆ ಮಲಗಿರುವ ವಿನಯ್ ಅವರಿಗೆ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರಿಸುಮಾರು 5 ಲಕ್ಷದವರೆಗೆ ಖರ್ಚು ಆಗಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ , ಈ ಬಡ ಕುಟುಂಬಕ್ಕೆ ಯಾವುದೇ ಆದಾಯ ಮೂಲಗಳಿಲ್ಲ ಹಾಗೂ ಹಣದ ಆಧಾರ ಸ್ತಂಭವಿಲ್ಲದಂತ ಪರಿಸ್ಥಿತಿ ಉಂಟಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಇವರು ತಮ್ಮ ಗಂಡನ ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ದಾನಿಗಳ ಸಹಾಯ ಹಸ್ತವನ್ನು ನಿರೀಕ್ಷಿಸುತ್ತಿದ್ದಾರೆ.
ಯಾವುದೇ ಹಣವಿಲ್ಲದೆ ಪ್ರತಿದಿನ ಕಣ್ಣಿರಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ಉಂಟಾಗಿದೆ.ದಯಮಾಡಿ ದಾನಿಗಳು ಕೈಲಾದ ಸಹಾಯ ಮಾಡುವ ಮೂಲಕ ವಿನಯವರ ಆಪರೇಷನ್ ಗೆ ನೆರವಾಗಿ ಸಹಾಯ ಹಸ್ತ ನೀಡಬೇಕಾಗಿ ಮನವಿ ಮಾಡಿದ್ದಾರೆ.
ಸಹಾಯ ಮಾಡಲಿಚ್ಚಿಸುವ ಮನಸ್ಸುಗಳು ಕೂಡಲೇ ಕೆಳಗೆ ಕೊಟ್ಟಿರುವ ನಂಬರನ್ನು ಹಣ ಸಹಾಯ ಮಾಡಬೇಕಾಗಿ ವಿನಂತಿ 9632544946……