ಚಿಕ್ಕಮಗಳೂರು.ಅರಣ್ಯ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಸಚಿವರು ಆದೇಶ ನೀಡಿದ ಹಿನ್ನೆಲೆಯಲ್ಲಿ ಒತ್ತುವರಿ ವಿರುದ್ದ ಅರಣ್ಯ ಇಲಾಖೆ ಸಮರ ಸಾರಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದ ಬೆನ್ನಲ್ಲೇ ಅರಣ್ಯ ಇಲಾಖೆ ಕಾರ್ಯಚರಣೆಗೆ ಇಳಿದಿದೆ.
ಕೇರಳ ದುರಂತರ ಬಳಿಕ ಒತ್ತುವರಿ ತೆರೆವಿಗೆ ಸಚಿವರು
ಆದೇಶ ನೀಡಿದ್ದರು. ಒಂದು ತಿಂಗಳೊಳಗೆ ಒತ್ತುವರಿ ತೆರವು ಗೊಳಿಸುವಂತೆ ಸಚಿವರಿಂದ ಖಡಕ್ ಸೂಚನೆ ಬಂದಿತ್ರು. ಈ ಹಿನ್ನೆಲೆಯಲ್ಲಿ ಕಾಫಿನಾಡಲ್ಲಿ ಅಕ್ರಮ ಅರಣ್ಯ ಒತ್ತುವರಿ ವಿರುದ್ಧ ಇಲಾಖೆ ಕಾರ್ಯಾಚರಣೆಗಿಳಿದಿದೆ.
20 ಎಕರೆ 11 ಗುಂಟೆ ಅರಣ್ಯ ಭೂಮಿ ಒತ್ತುವರಿ ತೆರೆವು ಕಾರ್ಯ ನಡೆದಿದೆ. ವಸ್ತಾರೆ ಗ್ರಾಮದ ಸರ್ವೇ ನಂಬರ್ 368ರಲ್ಲಿ 20 ಎಕರೆ 11 ಗುಂಟೆ ಭೂಮಿ ವಶಪಡಿಸಿಕೊಳ್ಳಲಾಗಿದೆ.
ರಮೇಶ್ ಎಂಬುವರಿಂದ ಮೀಸಲು ಅರಣ್ಯ ಭೂಮಿ ಒತ್ತುವರಿ ನಡೆದಿತ್ತು.ರಮೇಶ್ ಅವರು ಒತ್ತುವರಿ ಮಾಡಿ ಕಾಫಿ-ಮೆಣಸು ಬೆಳೆಸಿದ್ದರುಮ ಇಂದು ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯ ನಡೆಯಿತು.
200ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ತೆರವು ಕಾರ್ಯದಲ್ಲಿ ಪಾಲ್ಗೊಂಡಿದ್ದರು.