ಆ.14 ರಂದು ಬಜರಂಗದಳ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ..
ಸಕಲೇಶಪುರ – ಆಗಸ್ಟ್ 14 1947 ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ ದಿನವಾದರೂ ಅದರ ಮೊದಲೇ ಅಖಂಡವಾಗಿದ್ದ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಬ್ರಿಟಿಷರು ಅದಾಗಲೇ ಮಾಡಿ ಬಿಟ್ಟಿದ್ದರು. ಭಾರತಕ್ಕೆ ಅಖಂಡತೆಯನ್ನು ತಂದುಕೊಟ್ಟಿದ್ದ ಪಾಕಿಸ್ಥಾನ, ಬಾಂಗ್ಲಾದೇಶ ಮೊದಲಾದ ಭಾರತದ ಭೂಭಾಗಗಳನ್ನು ಭಾರತದಿಂದ ಬೇರ್ಪಡಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಭಾರತವನ್ನು ತುಂಡರಿಸಿ ಹೋಗಿದ್ದರು ಬ್ರಿಟಿಷರು. ಇದಕ್ಕೆ ಭಾರತದ ಕೆಲವು ಜನರ ಬೆಂಬಲವೂ ಅವರಿಗೆ ದೊರೆತಿದೆ ಎಂಬುವಂತಹ ವಿಚಾರವನ್ನು ಮರೆಯದೆಯೇ ಇಂದು ಅಂದರೆ ಆಗಸ್ಟ್ 14 ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವನ್ನು ಆಚರಣೆ ಮಾಡುತ್ತ ಬಂದಿದೆ ಬಜರಂಗದಳ.
ಖಂಡ ತುಂಡವಾಗಿರುವ ರಾಷ್ಟ್ರವನ್ನು ಮತ್ತೆ ಅಖಂಡ ಭಾರತವಾಗಿ ಮಾಡುವ ಸಂಕಲ್ಪವನ್ನು ಇಂದಿಗೂ ಮಾಡುತ್ತಲೇ ಇದ್ದೇವೆ. ದೇಶದ ಅಖಂಡತೆಯ ಕನಸನ್ನು ಹೊತ್ತು ಮಡಿದ ಅದೆಷ್ಟೋ ದೇಶಪ್ರೇಮಿ ನಾಯಕರಿಗೆ ನ್ಯಾಯ ಸಲ್ಲಿಸುವ ಸಲುವಾಗಿ ಅಖಂಡ ಭಾರತದ ಕನಸನ್ನು ಇಂದಿಗೂ ಹೊತ್ತುಕೊಂಡೇ ಸಾಗುತ್ತಿದೆ.
ದಿನಾಂಕ 14/08/2024 ರಂದು ಸಂಜೆ 6.30 ರಿಂದ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಬೃಹತ್ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ. ನಂತರ ಗುರುವೇ ಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಶ್ರೀ ಯು.ಪಿ ಶಶಿಕುಮಾರ್ ಕಿರುವಾಲೆ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಲಿದೆ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕಾಗಿದೆ ಎಂದು ಬಜರಂಗದಳದ ಶ್ರೀ ಜಿತ್ ಗೌಡ ಪತ್ರಿಕೆ ಮಾಹಿತಿ ನೀಡಿದ್ದಾರೆ.