ಸಕಲೇಶಪುರ ಲಯನ್ಸ್ ಕ್ಲಬ್ ಹಾಗೂ ಭಾರತ ಸೇವಾದಳ ಸಕಲೇಶಪುರ ಘಟಕ ಮತ್ತು ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಹಯೋಗದಲ್ಲಿ ಸಕಲೇಶಪುರದ ಬಾಳೆಗದ್ದೆಯ ಮಾನಸ ಪ್ರೌಢಶಾಲೆಗೆ ಉಚಿತ ಸೇವಾದಳದ ಸಮವಸ್ತ್ರವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಣಿಯವರು ಮತ್ತು ಲೈನ್ಸ್ ಕ್ಲಬ್ ನ ಅಧ್ಯಕ್ಷರು ಮತ್ತು ಸೇವಾದಳದ ಉಪಾಧ್ಯಕ್ಷರಾದ ಶ್ರೀಯುತ ಕೃಷ್ಣಪ್ಪ ಪೂಜಾರಿಯವರು ಮತ್ತು ಲಯನ್ ಸಂಸ್ಥೆಯ ಕಾರ್ಯದರ್ಶಿಯವರಾದ ವೆಂಕಟೇಶ್ ಕೆ ಆರ್ ಮತ್ತು ಖಜಾಂಚಿವರಾದ ಪ್ರೇಮ್ ನಾಥ್ ಮತ್ತು ಸಹಾಯಕ ಅಕ್ಷರ ದಾಸೋಹ ನಿರ್ದೇಶಕರಾದ ಶ್ರೀ ಮಂಜುನಾಥ್ ಮತ್ತು ಲಯನ್ ಸಂಸ್ಥೆಯ ಸದಸ್ಯರುಗಳಾದ ಗಿರೀಶ್ ಮಂಜು ಎನ್ ಎಸ್ ವಿಟ್ಟಲ್ ಮತ್ತು ಅಬ್ದುಲ್ ಖಾದಿರ್ ಹಾಗೂ ತಾಲೂಕಿನ ದೈಹಿಕ ಪರಿವೀಕ್ಷಕರಾದ ಕುಶ್ವಂತ್ ರವರು ಮತ್ತು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು