“ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಗಳು ಕೌಡಳ್ಳಿ, 78ನೇ ವರ್ಷದ ಸಡಗರ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ.
ಈ ಕಾರ್ಯಕ್ರಮಕ್ಕೆ ಶ್ರೀ ರೇಣುಕಪ್ಪ. ಡಿ.ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ರಾಷ್ಟ್ರಗೀತೆ, ನಾಡಗೀತೆ, ಧ್ವಜಾಗೀತೆ ಮತ್ತು ರೈತ ಗೀತೆ ಹಾಡಲಾಯಿತು.ನಂತರ ಮೂರು ವಿಭಾಗದ ವಿದ್ಯಾರ್ಥಿಗಳಿಂದ ಪಥ ಸಂಚಲನ ತುಂಬಾ ಸೊಗಸಾಗಿ ಮೂಡಿ ಬಂತು. ಈ ಕಾರ್ಯಕ್ರಮವು ಪ್ರಥಮ ವರ್ಷದ ಬಿ ‘ಇಡಿ ಪ್ರಶಿಕ್ಷಣಾರ್ಥಿ
ಕುಮಾರಿ ಅನುಷಾ ಇವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಯಿತು.
ದೊಡ್ದಬಸಪ್ಪ ಬಿ ‘ಇಡಿ ಪ್ರಶಿಕ್ಷಣಾರ್ಥಿ ಎಲ್ಲರನ್ನು ಸ್ವಾಗತಿಸಿದರು. ಸಂಯೋಜನಾಧಿಕಾರಿಯಾದ ಶ್ರೀ ಮಂಜುನಾಥ್. ಆರ್ ಇವರು ಪ್ರಾಸ್ತವಿಕ ನುಡಿಯನ್ನು ನುಡಿದರು.ಪ್ರೌಢಶಾಲಾ ವಿದ್ಯಾರ್ಥಿಯಾದ ಪ್ರೀತಮ್. ಸಿ. ಎಂ ಕಿರು ಭಾಷಣ ಮಾಡಿದರು.
ಮುಖ್ಯ ಅತಿಥಿಗಳು ಕಾರ್ಯಕ್ರಮ ವನ್ನು ಉದ್ದೇಶಿಸಿ ಮತನಾಡಿದರು.ಶ್ರೀ ನಂಜುಂಡಪ್ಪ, ಪ್ರಾಂಶುಪಾಲರು ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯ ಇವರು ಅಧ್ಯಕ್ಷರ ಭಾಷಣ ಮಾಡಿದರು.ಭೂಮಿಕಾ ಎಂ. ಡಿ ಎಲ್ಲರನ್ನು ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.