ಇದೇ ವರ್ಷದ ಮೇ ತಿಂಗಳಲ್ಲಿ ರಕ್ಷಿದಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದ,ಶ್ರೀಯುತ ತೋಟಪ್ಪ ಶೆಟ್ಟಿ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಮೂಲತಃ ಆಲೂರು ತಾಲ್ಲೂಕಿನ ಅಬ್ಬನದಲ್ಲಿ ಜನಿಸಿ.ಬಾಳ್ಳುಪೇಟೆಯ ಸಿದ್ದಣ್ಣಯ್ಯ ಫ್ರೌಢ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಪೂರೈಸಿ ಶಿಕ್ಷಕ ವೃತ್ತಿಗೆ ಸೇರಿದ್ದರು..ಈ ಹಿಂದೆ ಅಬ್ಬನ,ದೊಡ್ಡಕಲ್ಲೂರು,ಚಿಕ್ಕನಾಯಕನಹಳ್ಳಿ,ಅಗ್ರಹಾರ, ಅಬ್ಬನ,ಕೆ.ಹೊಸಕೋಟೆ ( ಸಿ,ಆರ್,ಪಿ,) ರಾಜೇಂದ್ರಪುರ,ಕೊಲ್ಲಹಳ್ಳಿ ( ಸಿ,ಆರ್,ಪಿ,) ಜಮ್ಮನಹಳ್ಳಿ.ರಕ್ಷಿದಿಯಲ್ಲಿ ಸೇವೆ ಸಲ್ಲಿಸಿದ್ದರು.ನಿವೃತ್ತಿಯಾದ ಕೆಲವೇ ದಿನದಲ್ಲಿ ನಿಧನರಾದುದು ವಿಪರ್ಯಾಸ..
ಶ್ರೀಯುತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ..ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ.