ರಾಮದೂತ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ
ವಿವಿಧ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ.
ರಾಮದೂತ ಹಿಂದೂ ಮಹಾಗಣಪತಿ ಸ್ವಾಗತ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ವತಿಯಿಂದ ಕೇಳಿಕೊಳ್ಳುವ ವಿಷಯವೆಂದರೆ
ದಿನಾಂಕ :12.09.24 ರ ಗುರುವಾರ ಗಣಪತಿ ವಿಸರ್ಜನೆ ಇರುವುದರಿಂದ ಸಕಲೇಶಪುರ ನಗರ ಮತ್ತು ಸುತ್ತಲಿನ ಗಣಪತಿ ಸಮಿತಿಯವರು ಗಣಪತಿ ವಿಸರ್ಜನೆ ಮಾಡಬಾರದು ಎಂದು ಕೇಳಿಕೊಳ್ಳುತ್ತಾ ಎಲ್ಲ ಸಮಿತಿಯವರು ಮತ್ತು ಗ್ರಾಮಸ್ಥರು ರಾಮದೂತ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ರಾಮದೂತ ಹಿಂದೂ ಗಣಪತಿ ಕರಪತ್ರ ಬಿಡುಗಡೆ
ದಿನಾಂಕ 23.08.24 ರಂದು ಭೂಮಿ ಪೂಜೆ, ಗೋಪೂಜೆ
06.09.24 ರಂದು ಮೆರವಣಿಗೆ ಮೂಲಕ ಗಣಪತಿಯನ್ನು ತರಲಾಗುವುದು.
07.09.24 ರಂದು ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮ
07.9.24 ರಿಂದ 11.09.24 ರವರೆಗೆ ಬೆಳಗ್ಗೆ ವಿಶೇಷ ಪೂಜೆಗಳು ಪ್ರಸಾದ ವಿನಿಯೋಗ ಕಾರ್ಯಕ್ರಮ ಮತ್ತು ಪ್ರತಿಸಂಜೆ ಸಾಂಸ್ಕೃತಿಕ ಹಾಗು ಭಜನಾ ಕಾರ್ಯಕ್ರಮಗಳು
12.09.24 ರಂದು ವೇದಬ್ರಹಮ್ಮ ಶ್ರೀ ರವಿಶಂಕರ ಭಟ್ರು ಅವರಿಂದ ವಿಶೇಷ ಹೋಮ ಹವ ಪ್ರಸಾದ ವಿನಿಯೋಗ ತದನಂತರ ಅದ್ದೂರಿ ಮೆರವಣಿಗೆಯೊಂದಿಗೆ ವಿವಿಧ ಕಲಾತಂಡಗಳು ಮಕ್ಕಳ ಭಜನೆ ತಂಡದೊಂದಿಗೆ, ನಾಸಿಕ್, ಡೊಳ್ಳುಕುಣಿತ ದೊಂದಿಗೆ ಪವಿತ್ರ ಹೇಮಾವತಿ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುವುದು.
ಗಣಪತಿ ವಿಸರ್ಜನಾ ಮೆರವಣಿಗೆ ತೆರಳುವ ರಸ್ತೆ ರಾಮದೂತ ಗಣಪತಿ ಪೆಂಡಾಲ್ ನಿಂದ ಹೊರಟು ಎಸ್.ಎಮ್ ಟವರ್ ವೃತ್ತ-ಕಮಲದೇವ್ ಕ್ಲಿನಿಕ್-ಗ್ಯಾಸ್ ಆಫೀಸ್-ಶ್ರುತಿ ಕ್ಯಾಂಟೀನ್ ರಸ್ತೆ-ಮಂಜರಾಬಾದ್ ಕ್ಲಬ್ ರಸ್ತೆ-ಆಶ್ರಿತ ಹೋಟೆಲ್ ವೃತ್ತ- ಬಿ.ಎಂ ರಸ್ತೆ- ಪಶುಆಸ್ಪತ್ರೆ- ಟ್ರೆಂಡ್ಸ್ ವೃತ್ತ-ಹಳೆಸಂತವೇರಿ-ಬಿ.ಎಂ ರಸ್ತೆ ಯಿಂದ ಮುಂದುವರೆದು ಹೇಮಾವತಿ ನದಿಯಲ್ಲಿ ಗಣಪತಿ ವಿಸರ್ಜನೆ.
ಈ ಎಲ್ಲ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಕ್ತರು ಆಗಮಿಸಬೇಕಾಗಿ ವಿನಂತಿ.
ಭಕ್ತರು ಸಾರ್ವಜನಿಕರು ರಸ್ತೆಯಲ್ಲಿ ಮನೆಯಿಂದ ಕಟ್ಟಡದಿಂದ ನಿಂತು ನೋಡುವುದಲ್ಲ ಮೆರವಣಿಗೆಯಲ್ಲಿ ಭಾಗವಹಿಸಿ ಅದ್ದೂರಿ ಮೆರವಣಿಗೆಗೆ ಸಾಕ್ಷಿಯಾಗಿ ವಿರಾಟ್ ಹಿಂದೂ ಪ್ರದರ್ಶನ ಮಾಡಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಕೌಶಿಕ್ ಹೆಚ್.ಎಂ
ಬಜರಂಗದಳ ಜಿಲ್ಲಾ ಸಹ ಸಂಯೋಜಕ
ಹಾಸನ ಜಿಲ್ಲೆ
ಪ್ರದೀಪ್ ಪೂಜಾರಿ
ರಾಮದೂತ ಹಿಂದೂ ಗಣಪತಿ ಸಂಚಾಲಕ
ಸಕಲೇಶಪುರ
ಗುರುಮೂರ್ತಿ
ರಾಮದೂತ ಹಿಂದೂ ಗಣಪತಿ ವ್ಯವಸ್ಥಾಪನಾ ಸಮಿತಿ
ಸಕಲೇಶಪುರ·