ಸಕಲೇಶಪುರ: ನಗರ ಪುರಸಭೆಗೆ ಅಧ್ಯಕ್ಷರಾಗಿ ಜೆಡಿಎಸ್ ನ ಜ್ಯೋತಿ ರಾಜಕುಮಾರ್ ಉಪಾಧ್ಯಕ್ಷರಾಗಿ ಜರೀನಾ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಜ್ಯೋತಿ ಹಾಗೂ ಕಾಂಗ್ರೆಸ್ ಪಕ್ಷದ ಅನ್ನಪೂರ್ಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿ ಎಸ್ ಪಕ್ಷದ ಜರೀನಾ ಹಾಗೂ ಕಾಂಗ್ರೆಸ್ ಪಕ್ಷದ ರೇಷ್ಮಾ ಬಾನು ನಾಮ ಪತ್ರ ಸಲ್ಲಿಸಿದ್ದರು.
ನಗರದ ಒಟ್ಟು 23 ಸ್ಥಾನಗಳಲ್ಲಿರುವ ಸಕಲೇಶಪುರ ಪುರಸಭೆಯಲ್ಲಿ ಜೆಡಿಎಸ್ ಪಕ್ಷದ 13, ಕಾಂಗ್ರೆಸ್ ಪಕ್ಷದ 5, ಬಿಜೆಪಿ ಪಕ್ಷದ 2, ಹಾಗೂ ಪಕ್ಷೇತರರು 3 ಅಭ್ಯರ್ಥಿಗಳು ಜೆಡಿಎಸ್ ಅಭ್ಯರ್ಥಿಗಳು ಪಕ್ಷೇತರರ ನೆರವಿನಿಂದ 15 ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಬೆಂಬಲಿತರು 5 ಮತಗಳನ್ನು ಪಡೆದಿದ್ದಾರೆ.ಬಿಜಿಪಿಯ 2 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.