ಡಿ ಆರ್ ಷಣ್ಮುಕಪ್ಪ ಚಾರಿಟಬಲ್ ಟ್ರಸ್ಟ್ ದೊಡ್ಡ ಗುದ್ದವಳ್ಳಿ ಹಾಸನ ಇವರಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಜಮೀಟ್ರಿ ವಿತರಣೆ
ಸಕಲೇಶಪುರದ ಕೌಡಳ್ಳಿಯಲ್ಲಿ ರುವ jss ಕನ್ನಡ ಮಾಧ್ಯಮ ಪ್ರೌಢ ಶಾಲೆಯ 130 ಮಕ್ಕಳಿಗೆ ಡಿ ಆರ್ ಷಣ್ಮುಖಪ್ಪ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಪ್ರೀತಿ ಯವರು ಉಚಿತವಾಗಿ ತಲಾ 5 ನೋಟ್ ಬುಕ್ ಹಾಗೂ ಜಾಮೀಟ್ರೀ ಬಾಕ್ಸ್ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಫಿ ಬೆಳೆಗರರಾದ ಟಿ ಪಿ ಸುರೇಂದ್ರ ರವರು ಮಾತನಾಡುತ್ತ ಶ್ರೀಮತಿ ಪ್ರೀತಿಯವರ ದಾನ ಮಾಡುವ ಗುಣ ಎಲ್ಲರಲ್ಲೂ ಬರಲಿ, ಪ್ರೀತಿಯವರು ತನ್ನ ತಂದೆಯ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದು, ವಿದ್ಯಾರ್ಥಿಗಳು ಕೂಡಾ ಮುಂದಿನ ದಿನಗಳಲ್ಲಿ ಈ ಆದರ್ಶಗಳನ್ನ ಮೈಗುಡಿಸಿಕೊಳ್ಳಬೇಕು ಎಂದರು, ಹಾಗೆಯೇ ಷಣ್ಮುಕಪ್ಪ ಟ್ರಸ್ಟ್ ನ ಕುಟುಂಬದವರೆಲ್ಲರಿಗೂ ಭಗವಂತ ಒಳ್ಳೆಯದನ್ನು ಕರುಣಿಸಲಿ ಎಂದರು, ಮತ್ತೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ
JSS ಸಂಸ್ಥೆಯ ಸಂಯೋಜಕರಾದ ಆರ್ ಮಂಜುನಾಥ್ ರವರು ಮಾತನಾಡುತ್ತ ನಮ್ಮ ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳು ಕೂಲಿ ಕಾರ್ಮಿಕರ ಮಕ್ಕಳು, ನಿಮ್ಮ ಟ್ರಸ್ಟ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದಕ್ಕೆ, ವಿದ್ಯಾರ್ಥಿಗಳ ಪರವಾಗಿ ಟ್ರಸ್ಟ್ ನ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಪ್ರೀತಿ, ಡಾಕ್ಟರ್ ನಂಜುಂಡಪ್ಪ, ರೇಣುಕಾರಾಧ್ಯ ಲೋಹಿತ್ ಕೌಡಳ್ಳಿ, ಶ್ರೀಮತಿ ಲಕ್ಷ್ಮಿ,ಯಶೋದಾಮ್ಮಾ ಶಾಲೆಯ ಎಲ್ಲಾ ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.