ಎತ್ತಿನಹೊಳ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳದಿದ್ದರು. ತರಾತುರಿಯಲ್ಲಿ ದಿನಾಂಕ 06/09/2024 ರಂದು ನಡೆಯಲಿರುವ ಎತ್ತಿನಹೊಳ ಯೋಜನೆ ಉದ್ಘಾಟನ ಕಾರ್ಯಕ್ರಮ ಕಾನೂನು ಬಾಹಿರವಾಗಿದ್ದು.
ಸಕಲೇಶಪುರಕ್ಕೆ ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದು ಸುಳ್ಳು, ಭರವಸೆ ನೀಡಿ ಇಂದು ಸಕಲೇಶಪುರಕ್ಕೆ ಯಾವುದೇ ಅನುದಾನ ನೀಡದೆ ಇರುವುದರಿಂದ ಉದ್ಘಾಟನೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಲೇಶಪುರ ತಾಲ್ಲೂಕು ಅಭಿವೃದ್ಧಿಗೆ ತಕ್ಷಣ 1000 ಕೋಟಿ ಹಣ ಬಿಡುಗಡೆ ಮಾಡಲು ಆಗ್ರಹಿಸುವ ಬಗ್ಗೆ
ಈ ಬಾರಿಯ ಮಳೆಯಿಂದ ಸಂಪೂರ್ಣ ಕಾಫಿ, ಮೆಣಸು, ಏಲಕ್ಕಿ, ಅಡಕೆ ಸಂಪೂರ್ಣ ನಾಶವಾಗಿದ್ದು ರೈತ ಸಂಕಷ್ಟದಲ್ಲಿ ಇದ್ದಾರೆ . ರಸ್ತೆಗಳು ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು.
ಜನಜೀವನ ಅಸ್ತಾವ್ಯಸ್ಥವಾಗಿದೆ. ಸಕಲೇಶಪುರದ ಜನತೆಯ ಜೀವನ ದುಸ್ಸರವಾಗಿದ್ದು ಕಾಫಿ ಮೆಣಸು ಅತಿ ಮಳೆಯಿಂದ ಬೆಳ ಹಾನಿಯಾಗಿದ್ದು ಸಣ್ಣ ಬೆಳಗಾರರು ಕಂಗಾಲಾಗಿದ್ದು, ಇದರ ಜೊತೆಗೆ ತಾಲ್ಲೂಕಿನ ರಸ್ತೆಗಳು ಅಲ್ಲಲ್ಲಿಮುರಿದು ಬಿದಿದ್ದು. ಅತಿ ಹೆಚ್ಚು, ಎತ್ತಿನಹೊಳ ಕಾಮಗಾರಿ ನಡೆದಿರುವ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಕುಸಿದು ಬಿದಿದ್ದು. ಮುಂದೆಯೂ ಅನಾಹುತಗಳು ಹೆಚ್ಚು ಆಗುವ ಸಂಭವವಿದೆ.
ಸಕಲೇಶಪುರ ಭಾಗದಲ್ಲಿನ ಬಹುಕೋಟಿ ಎತ್ತಿನಹೊಳೆ ಯೋಜನೆಯು ಸಂಪೂರ್ಣ ಕಾಮಗಾರಿ ಮುಗಿದಿಲ್ಲ ಆದರೂ ಉದ್ಘಾಟನೆ ತರಾತುರಿ ನಡಿಯುತಿದ್ದು. ಆದರೂ ಸಹ ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ರಸ್ತೆ ವ್ಯವಸ್ಥೆಗಳು ಸಂಪೂರ್ಣ ಹಾಳಾಗಿದ್ದು. ಮಲೆನಾಡಿನ ಜನರ ನಿತ್ಯ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿದ್ದಾರೆ.
ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಉದ್ಘಾಟನೆ ಮಾಡುವ ಮೊದಲು ಮಲೆನಾಡಿನ ಸಮಸ್ಯೆಗೆ 1000 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ. ಇಲ್ಲದಿದ್ದಲ್ಲಿ ದಿನಾಂಕ 06.09.24 ರಂದು ನಡಿಯಲಿರುವ ಎತ್ತಿನಹೊಳ ಯೋಜನೆ ಉದ್ಘಾಟನ ವಿರುದ್ಧ ಹೋರಾಟ ಮಾಡಲಾಗುವುದು ಎಂದೂ ಈ ಮನವಿ ಮೂಲಕ ಕೊಳ್ಳುತ್ತೇವೆ.