ಎತ್ತಿನಹೊಳೆ ಮಹತ್ವಕಾಂಕ್ಷಿ ಯೋಜನೆ. ಕಾಮಗಾರಿಯ ಉದ್ಘಾಟನೆಗೆ ಒಂದು ದಿನ ಬಾಕಿ ಇರುವಾಗಲೇ ಟನಲ್ ಕುಸಿದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅವೈಜ್ಞಾನಿಕ ಎತ್ತಿನಹೊಳೆ ಕಾಮಗಾರಿ ಚಾಲನೆಗೆ ಒಂದು ದಿನ ಬಾಕಿ ಇರುವಾಗಲೇ ಹಲವು ಕಡೆ ಟನಲ್ ಕುಸಿದ ಪ್ರಕಾರಗಳು ಬೆಳಕಿಗೆ ಬಂದಿದೆ. ಕಬ್ಬಿಣ ಮತ್ತು ಕಾಂಕ್ರೀಟ್ ಮಿಶ್ರಿತ ಮಾಡದೆ ಅವೈಜ್ಞಾನಿಕವಾಗಿ ಕಾಮಗಾರಿ ಮುಗಿಸಿ ಉದ್ಘಾಟನೆಗೆ ಸಿದ್ದ ಮಾಡಿದ್ದಾರೆ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲೂರು ತಾಲೂಕು ಮಡಬಲ್ಲು ಗ್ರಾಮದಲ್ಲಿ ಹಲವು ಕಡೆ ಎತ್ತಿನಹೊಳೆ ಕಾಮಗಾರಿಯ ಟನಲ್ ಕುಸಿದಿದ್ದು ಉದ್ಘಾಟನೆಗೆ ಒಂದು ದಿನ ಬಾಕಿ ಇದೆ. ಆದರೂ ಇಂಜಿನಿಯರ್ ಗಳು ಸ್ಥಳ ವೀಕ್ಷಣೆ ಮಾಡದೆ. ಎತ್ತಿನಹೊಳೆ ನೀರು ಹರಿಸಲು ಮುಂದಾಗಿದ್ದಾರೆ ಆರನೇ ತಾರೀಕಿನಂದು ಉದ್ಘಾಟನೆಗೆ ಸಿದ್ಧವಾಗಿರುವ ಎತ್ತಿನಹೊಳೆ ನೀರು ಹರಿಸುವ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆಗೆ ಬರುವ ಒಂದು ದಿನ ಬಾಕಿ ಇದೆ ಅನಾಹುತಕ್ಕೆ ಕಾದು ಕುಳಿತಂತೆ ಅವೈಜ್ಞಾನಿಕ ಕಾಮಗಾರಿಯಿಂದ ಎತ್ತಿನಹೊಳೆ ನೀರು ಅರಿದರೆ ಕಟ್ಟೆ ಹೊಡೆದು ಹಲವು ಹೊಲ ಮನೆ ಕೊಚ್ಚಿ ಹೋಗುವ ಪರಿಸ್ಥಿತಿ ಇದೆ ಎತ್ತಿನಹೊಳೆ ಕಾಮಗಾರಿ ಇಂಜಿನಿಯರ್ಗಳು ಯಾವುದೇ ಸ್ಥಳ ಪರಿಶೀಲನೆ ಮಾಡದೆ ಉದ್ಘಾಟನೆ ಮಾಡಿಸಲು ಮುಂದಾಗಿರೋ ಇಂಜಿನಿಯರ್ಗಳು. ಗ್ರಾಮಸ್ಥರು ಮನೆಮಠ ಹೊಲಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.