ಪಶ್ಚಿಮ ಘಟ್ಟದ ಹೋರಾಟ ಸಮಿತಿಯ ಸಭೆ ಸಕಲೇಶಪುರ ತಾಲ್ಲೂಕಿನ ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಾಳೆ 11 ಗಂಟೆಗೆ (5/09/2024 ) ಗುರುವಾರ ನಡೆಯಲಿರುವ ಸಭೆಗೆ ಖ್ಯಾತ ಹೈಕೋರ್ಟ್ ನ್ಯಾಯವಾದಿಗಳು ಹಾಗೂ ಮೂಡಿಗೆರೆ ತಾಲ್ಲೂಕು. ಕೊಡಗು ಜಿಲ್ಲೆಯ ರೈತ ಹೋರಾಟ ಗಾರರು ಆಗಮಿಸುವರು.
ನಮ್ಮ ತಾಲೂಕಿನಲ್ಲಿಯ ರೈತರು ಕೂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಭೆ ನಂತರ ಎಲ್ಲಾ ರೈತರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ.
ಇಂತಿ ತಮ್ಮ ವಿಶ್ವಾಸಿ ಪಶ್ಚಿಮ ಘಟ್ಟದ ಮೂಲ ನಿವಾಸಿಗಳ ಹೋರಾಟ ಸಮಿತಿಯ ಉದ್ದೇಶಗಳು
1)ಡೀಮ್ಡ್ ಅರಣ್ಯ ಪ್ರದೇಶ
2)ಆನೆ ಮತ್ತು ಕಾಡುಪ್ರಾಣಿ ಮಾನವ ಸಂಘರ್ಷ
3)ರೈತರ ಒಪ್ಪಿಗೆ ಮೇರೆಗೆ ಸ್ಥಳಾಂತರ
4)ಸೆಕ್ಷನ್ ಫೋರ್ ಅರಣ್ಯ ಪ್ರದೇಶದ ವಿರುದ್ಧ
5)ಅತಿವೃಷ್ಟಿಯಿಂದ ಹಾನಿಗೊಳಗಾದ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಗೆ ವಿಶೇಷ ಅನುದಾನ.
ಈ 5 ವಿಷಯಗಳಲ್ಲಿ ಮೊದಲ ಆದ್ಯತೆ ಡೀಮ್ ಅರಣ್ಯ ಪ್ರದೇಶದ ವಿರುದ್ಧ ಹೋರಾಟ ಮಾಡುವುದು.
ಇಂತಿ ತಮ್ಮ ವಿಶ್ವಾಸಿ
ಸಮಿತಿಯ ಅಧ್ಯಕ್ಷರು
ಬಾಚಿಹಳ್ಳಿ ಪ್ರತಾಪ್ ಗೌಡ.