ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಹಾಗೂ ಸಚಿವರುಗಳು ನಾಳೆ ಸಕಲೇಶಪುರಕ್ಕೆ ಆಗಮಿಸಲಿದ್ದು , ಇದರ ಸಂಬಂಧ ಸಕಲೇಶಪುರ ತಾಲೂಕಿನ ಕೆಲವು ಕಡೆ ರಸ್ತೆ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ನಿಷೇಧಿಸಲಾಗಿದೆ ಹಾಗೂ ಬದಲಿ ಮಾರ್ಗಗಳನ್ನು ಕಲ್ಪಿಸಲಾಗಿರುತ್ತದೆ , ಸಾರ್ವಜನಿಕರು ಈ ಕೆಳಗಿನ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗಿ ಸೂಚಿಸಲಾಗಿದೆ.
1. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಈಶ್ವರಹಳ್ಳಿ ಕೂಡುಗೆಯಿಂದ ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
2. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಬಾಗೆ-ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
3. ಬೇಲೂರು- ಅರೇಹಳ್ಳಿ ಮಾರ್ಗವಾಗಿ ಬರುವ ಸಾರ್ವಜನಿಕರು ಸುಂಡೇಕೆರೆ ಸರ್ಕಲ್ ಮೂಲಕ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
4. ಗುಲಗಳಲೆ ಚಿಕ್ಕಿ ಫ್ಯಾಕ್ಟರಿ ಮುಖಾಂತರ ಹೆಬ್ಬನಹಳ್ಳಿ ಸಮಾರಂಭ ಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.