ಸಕಲೇಶಪುರದ ಸರ್ಕಾರಿ ಮಹಿಳಾ ಅಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ವತಿಯಿಂದ ಗೌರಿ ಹಬ್ಬದ ಬಾಗಿಣ ನೀಡಿ ಗೌರವಿಸದ ಕಾರ್ಯಕರ್ತರು.
ಹಿಂದೂ ಸಂಪ್ರದಾಯದಂತೆ ಗೌರಿ ಹಬ್ಬದ ಸುಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಪೂರ್ವಕವಾಗಿ ಬಾಗಿಣ ಅರ್ಪಿಸುವ ಸಂಪ್ರದಾಯವಿದ್ದು ಅದರಂತೆ ಸಕಲೇಶಪುರದ ಮಾನ್ಯ ಉಪವಿಭಾಗಾಧಿಕಾರಿಗಳಾದ ಶ್ರೀ ಶ್ರುತಿ ಮತ್ತು ಜಲಾನಯನ ವಲಯ ಅರಣ್ಯಧಿಕಾರಿ ಶ್ರೀಮತಿ ಶಿಲ್ಪ ಅವರಿಗೆ ಕಾರ್ಯಕರ್ತರು ಬಾಗಿಣ ನೀಡಿ ಇನ್ನಷ್ಟು ಉನ್ನತ ಹುದ್ದೆ ಅಲಂಕರಿಸಿ ಎಂದು ಹಾರೈಸಿದ ಕಾರ್ಯಕರ್ತರು.
ರಾಮದೂತ ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಯೋಜಕ ಕೌಶಿಕ್, ರಾಮದೂತ ಹಿಂದೂ ಮಹಾಗಣಪತಿ ಸಂಚಾಲಕ ಪ್ರದೀಪ್ ಪೂಜಾರಿ,ಗುರುಮೂರ್ತಿ, ವೀಜಿತ್ ಇತರರು ಇದ್ದರು.