ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆ ಯಲ್ಲಿ ಗ್ರಾಮದ ಹಲವಾರು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು,
ಮುಖ್ಯವಾಗಿ ಹೊಸಕೋಟೆ ಗ್ರಾಮ ವ್ಯಾಪ್ತಿಯ ಅಕ್ರಮ ಗಣಿಗಾರಿಕೆ ವಿಚಾರವಾಗಿ ಪುಟ್ಟೇಗೌಡರು ಮಾತನಾಡಿ ಕೆ ಇ ಬಿ ಯವರು ಗಣಿ ಗಾರಿಕೆ ಮಾಡಲು ಆದೇಶ ನೀಡಿರುವುದು ಖಂಡನೀಯ ಹಾಗೂ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಕೆಲವು ಲೋಪಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಂಬಂಧಪಟ್ಟ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಅನ್ಯಾಯದ ವಿರುದ್ಧ ಹೋರಾಡುವುದಾಗಿ ತಿಳಿಸಿದರು.
ಮುಖ್ಯವಾಗಿ ಹೊಸಕೋಟೆ ಗ್ರಾಮ ವ್ಯಾಪ್ತಿಯ ಅಕ್ರಮ ಗಣಿಗಾರಿಕೆ ವಿಚಾರವಾಗಿ ಕೆ ಈ ಬಿ ಅವರು ಗಣಿಗಾರಿಕೆ ಮಾಡಲು ಆದೇಶ ನೀಡಿರುವುದು ಖಂಡನೀಯ ಹಾಗೂ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಲೋಪಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಂಬಂಧಪಟ್ಟ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಅನ್ಯಾಯದ ವಿರುದ್ಧ ಹೋರಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ವಸಂತ್ ಹೊಸೂರು ಮಾತನಾಡಿ 94ಸಿ ಹಕ್ಕು ಪತ್ರ ಕೊಡಿಸುವಂತೆ ಹಾಗೆಯೇ ಸರ್ಕಾರಿ ಭೂಮಿ ಒತ್ತುವರಿ ತೆರವು ಗೊಳಿಸುವಂತೆ ಅಗ್ರಹಿಸಿದರು,
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಂಜುಳಾ ಮಂಜುನಾಥ್ , ಉಪಾಧ್ಯಕ್ಷರಾದ ಅನಿಲ್ ಕುಮಾರ್, ಕಾರ್ಯದರ್ಶಿ ಸಿದ್ದೇಶ್, ಬಿಲ್ ಕಲೆಕ್ಟರ್ ಪ್ರವೀಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀಣಾ ಎಚ್ ಡಿ ಸಕಲೇಶಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಪ್ರಕಾಶ್ ಕುಮಾರ್ ಯು ಎಂ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಕಾರ್ಯದರ್ಶಿ ಸಿದ್ದೇಶ್, ಬಿಲ್ ಕಲೆಕ್ಟರ್ ಪ್ರವೀಣ್ ಮತ್ತು ಸಾವಿರ್ವಜನಿಕರು ಇತರರು ಹಾಜರಿದ್ದರು.