
ತಡಕಲು ಕೌಕೋಡಿಯಲ್ಲಿ ವಿಭಿನ್ನ ರೀತಿಯಲ್ಲಿ ಗಣೇಶೋತ್ಸವ ಆಚರಣೆ.
ಗಮನ ಸೆಳೆದಯುತ್ತಿರು ಪ್ರಸಾದದೊಂದಿಗೆ ನೀಡುತ್ತಿರುವ ಸಂದೇಶ.
ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮಪಂಚಾಯತಿಯ ತಡಕಲು / ಕೌಕೋಡಿಯಲ್ಲಿ ಹಲವು ವರ್ಷಗಳ ನಂತರ ಗಣೇಶೋತ್ಸವ ಆಚರಣೆ ಮಾಡುತ್ತಿದ್ದು ತಡಕಲು ಕೌಕೋಡಿ ಯುವಕರು ಸಾರ್ವಜನಿಕರಿಗೆ ವಾಹನ ತಡೆದು ಪ್ರಸಾದ ವಿತರಣೆ ಮಾಡುತ್ತಿದ್ದು “ನಮ್ಮ ನಡೆ ಬಾಲಗಂಗಾಧರ ತಿಲಕರ ಕಡೆ,
ಗೌರಿ ಗಣೇಶ ಹಬ್ಬದ ಶುಭಾಶಯಗಳು, ಎಂದು ಮುದ್ರಿಸಿ ಅದರ ಹಿಂಬದಿಯಲ್ಲಿ ‘ಜಾತಿಯತೆಯನ್ನು ಬಿಟ್ಟು ಸಮಾನತೆಯೊಂದಿಗೆ ಅಖಂಡ ಭಾರತದ ವೈಭವ ಮೆರೆಸಲು ಪಣತೊಟ್ಟು ಮುನ್ನಡೆಯೋಣ’ ” ಎಂಬ ಸಂದೇಶದೊಂದಿಗೆ ಪ್ರಸಾದ ವಿತರಣೆ ಮಾಡುತ್ತಿದ್ದಾರೆ.