ದಿನಾಂಕ: 24-10-2024 ರಂದು ಸಕಲೇಶಪುರ ವಲಯ, ಬೆಳಗೋಡು ಶಾಖಾ ವ್ಯಾಪ್ತಿಯ ಸುಂಡಹಳ್ಳಿ ಗ್ರಾಮದ ಎಸ್. ಎಸ್. ಎಸ್ಟೇಟ್ ಹತ್ತಿರ ಅಶೋಕ ಲೇಯ್ಲ್ಯಾಂಡ್ ವಾಹನದಲ್ಲಿ ತಾರೆ ಮತ್ತು ಹಲಸು ಜಾತಿಯ ಬಿಲ್ಲೆಟ್ಸ್ ನ್ನು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ A1. ದಯಾನಂದ ಬಿನ್ ನಿಂಗರಾಜು, ಗಂಜಿಗೆರೆ ಗ್ರಾಮ, ಆಲೂರು ತಾ. A2. ಪ್ರಜ್ವಲ್ ಬಿನ್ ಚಿನ್ನಪ್ಪ, ಮಾದಿಹಳ್ಳಿ ಗ್ರಾಮ, ಆಲೂರು ತಾ. ಇವರ ವಿರುದ್ಧ ಅ. ಮೊ. ಸಂ. 39/2024-25 ದಿನಾಂಕ: 24-10-2024 ನ್ನು ದಾಖಲಿಸಿ ಸ್ವತ್ತು ಮತ್ತು ವಾಹನವನ್ನು ಸರ್ಕಾರಿ ನಾಟಾ ಸಂಗ್ರಹಾಲಯ, ಹಾಸನಕ್ಕೆ ಸಾಗಿಸಲಾಯಿತು.
ಸಕಲೇಶಪುರ ವಲಯ ಅರಣ್ಯ ಅಧಿಕಾರಿಗಳಾದ ಎಚ್ ಆರ್ ಹೇಮಂತ್ ಕುಮಾರ್ (ಆರ್ ಎಫ್ ಓ ) ಮಂಜುನಾಥ್ ಉಪವಲಯ ಅರಣ್ಯ ಅಧಿಕಾರಿ. ಜಯಸ್ವಾಮಿ ಗಸ್ತು ಅರಣ್ಯ ಪಾಲಕರು. ಅರುಣ್ ಗಸ್ತು ಅರಣ್ಯ ಪಾಲಕರು ಚಿದಾನಂದ ವಾಹನ ಚಾಲಕರು. ಕಾರ್ಯಚರಣೆ ನಡೆಸಿ ವಾಹನ ವಶಕ್ಕೆ ಪಡೆದಿದ್ದಾರೆ .